ದಾವಣಗೆರೆ : 15 ವರ್ಷಗಳ ನಂತರ ಮತ್ತೆ ಪಂಚ ಪೀಠದ ಸ್ವಾಮೀಜಿಗಳು ಒಂದಾಗಿದ್ದಾರೆ. ರಂಬಾಪುರಿ ಶ್ರೀ, ಉಜ್ಜಯಿನಿ, ಕಾಶಿ, ಕೇದಾರ, ಶ್ರೀಶೈಲ, ಮಠಾಧೀಶರು ದಾವಣಗೆರೆ ನಗರದ ಅಭಿನವ ರೇಣುಕ ಮಂದಿರಕ್ಕೆ ಜೊತೆಯಾಗಿ ಆಗಮಿಸಿ ಪೂಜೆ ಸಲ್ಲಿಸಿದರು.
ಪಂಚಪೀಠದ ಶ್ರೀಗಳನ್ನು ಒಟ್ಟಾಗಿ ವೇದಿಕೆ ಮೇಲೆ ನೋಡುತ್ತಿದ್ದಂತೆ ಭಕ್ತರು ಕೇಕೆ ಹಾಕಿ ಸಂತಸ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜಾತಿ ಜನಗಣತಿ ಹಿನ್ನಲೆ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಪಂಚ ಪೀಠಧ್ಯಕ್ಷರು ಒಂದಾಗಿದ್ದಾರೆ ಎನ್ನುವ ಚರ್ಚೆಯೂ ಸಾಮಾಜಿಕ ವಲಯದಲ್ಲಿ ಕೇಳಿ ಬಂದಿದೆ.