ಆಗಾಗ ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುವ ಮೂಲಕ ಹೆಚ್ಚು ಜನರ ಅವಶ್ಯಕ ಆಪ್ ಆಗಿರುವ ವಾಟ್ಸಾಪ್ ಈಗ ಮತ್ತಷ್ಟು ಫೀಚರ್ ಗಳನ್ನು ಪರಿಚಯಿಸುತ್ತಿದೆ.
ಇನ್ ಸ್ಟಾಗ್ರಾಮ್ (Instagram) ಮತ್ತು ಫೇಸ್‌ಬುಕ್ (Facebook) ರೀತಿಯಲ್ಲಿಯೇ ಇರುವ ಫೀಚರ್ ವಾಟ್ಸ್ ಆ್ಯಪ್ (WhatsApp app) ನಲ್ಲೂ ಬಂದಿದೆ. ಫೇಸ್‌ಬುಕ್‌ನಲ್ಲಿ ನೀವು ಬಳಸುತ್ತಿದ್ದ ಸಿಂಬಲ್ ಗಳು ಇನ್ನು ಮುಂದೆ ನಮಗೆ ವಾಟ್ಸಾಪ್ ನಲ್ಲಿ ಸಿಗುತ್ತವೆ.
ವಾಟ್ಸ್ ಆ್ಯಪ್ ಇದೀಗ ಸ್ಟೇಸ್ ನಲ್ಲಿ ಹೊಸ ಮಾದರಿಯ ವಿನ್ಯಾಸವನ್ನು ಪರಿಚಯಿಸಲಾಗಿದೆ.
ವಾಟ್ಸ್ ಆ್ಯಪ್ ನಲ್ಲಿ ನೀವು ಸ್ಟೇಟಸ್ ಹಾಕಿದರೆ ಅದನ್ನು ನೋಡಿದವರು ಹಾರ್ಟ್ ಸಿಂಬಲ್ ಒತ್ತುವುದಕ್ಕೆ ಅವಕಾಶ ಇದೆ. ಈ ರೀತಿ ಹಾರ್ಟ್ ಸಿಂಬಲ್ ಒತ್ತಿದರೆ, ನಿಮ್ಮ ಸ್ಕ್ರೀನ್ ಮೇಲೆ ಹಾರ್ಟ್ ಸಿಂಬಲ್ ಮೂಡಲಿದೆ. ಸ್ಟೇಟಸ್‌ನ ಬಲ ಭಾಗದಲ್ಲಿ ಹೃದಯಾಕಾರದ ಸಿಂಬಲ್ ಸೃಷ್ಟಿಸಲಾಗಿದೆ. ಈ ಸಿಂಬಲ್ ನ ಮೇಲೆ ನೀವು ಒತ್ತಿದರೆ, ಆ ಸ್ಟೇಟಸ್ ಹಾಕಿದವರ ಚಾಟ್ ಬಾಕ್ಸ್ ಗೆ ಹೋಗದೆ, ಸ್ಟೇಟಸ್ ನಲ್ಲೇ ಯಾರು ರಿಯಾಕ್ಟ್ ಮಾಡಿದ್ದಾರೆ ಎನ್ನುವುದನ್ನು ನೋಡಬಹುದಾಗಿದೆ.
ಯಾರಾದರೂ ನಮ್ಮ ಸ್ಟೇಟಸ್ ಲೈಕ್ ಮಾಡಿದರೆ ನಾವು ನಮ್ಮ ಚಾಟ್ ಬಾಕ್ಸ್ (ಮೆಸೇಜ್ ಚಾಟ್)ಗೆ ಹೋಗಿ ನೋಡಬೇಕಾಗಿತ್ತು. ಆದರೆ, ಈಗ ಸ್ಟೇಟಸ್ ನ ಅಡಿಯಲ್ಲೇ ಯಾರು ರಿಯಾಕ್ಟ್ ಮಾಡಿದ್ದಾರೆ ಎಂಬುವುದನ್ನು ತಿಳಿಯಬಹುದಾಗಿದೆ. ಅಲ್ಲದೇ ಯಾರು ಹಾರ್ಟ್ ಸಿಂಬಲ್ ಒತ್ತಿದ್ದಾರೆ ಎನ್ನುವುದು ಸಹ ಸ್ಟೇಟಸ್‌ನ ಮೇಲೆಯೇ ತೋರಿಸುತ್ತದೆ.
ಇದರೊಂದಿಗೆ ಸ್ಟೇಟಸ್ ಹಾರ್ಟ್ ಸಿಂಬಲ್ ನೊಂದಿಗೆ ಏಕಕಾಲಕ್ಕೆ ಹಲವು ಸ್ಟೇಟಸ್ ಗಳನ್ನು ನೋಡುವುದು ಮತ್ತೊಂದು ಫೀಚರ್ ನ್ನು ಕೂಡ ಪರಿಚಯಿಸಿದೆ. ಸಾಮಾನ್ಯವಾಗಿ ಮೊದಲೆಲ್ಲ ನೀವು ಒಂದು ಬಾರಿ ಒಂದು ಸ್ಟೇಟಸ್ ನೋಡಬಹುದಾಗಿತ್ತು. ಆದರೆ, ಈಗ ನೀವು ಏಕಕಾಲಕ್ಕೆ ಎಂಟು ಜನ ಯಾವ ಸ್ಟೇಟಸ್ ಇಟ್ಟಿದ್ದಾರೆ ಎಂಬುವುದನ್ನು ನೋಡಬಹುದು. ಏಕಕಾಲಕ್ಕೆ 8 ಸ್ಟೇಟಸ್ ಆಪ್ಷನ್ ತೆಗೆದುಕೊಳ್ಳಲಿದ್ದು, ನಿಮಗೆ ಬೇಕಾದ ಸ್ಟೇಟಸ್ ಆಯ್ಕೆ ಮಾಡಿಕೊಂಡು ನೋಡಬಹುದಾಗಿದೆ.
ಕೆಲವರ ಸ್ಟೇಟಸ್ ನೋಡುವುದು ಬೇಡ ಎನಿಸಿದರೆ, ಆ ಸ್ಟೇಟಸ್ ಸ್ಕಿಪ್ ಮಾಡುವುದಕ್ಕೂ ಕೂಡ ಇಲ್ಲಿ ಅವಕಾಶವಿದೆ. ಈ ಹೊಸ ಫೀಚರ್ ಈಗಾಗಲೇ ಮೆಟಾ ಸಂಸ್ಥೆಯ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಜನಪ್ರಿಯವಾಗಿದ್ದು, ಈಗ ವಾಟ್ಸಾಪ್ ಗೂ ಇದನ್ನೇ ಪರಿಚಯಿಸಲಾಗಿದೆ.