ನವದೆಹಲಿ: ಚೀನಾದಲ್ಲಿ ಆತಂಕಕ್ಕೆ ಕಾರಣವಾಗಿರುವ ಹೊಸ ಹೆಮ್ಮಾರಿಯ ಶಾಕ್ ಈಗ ಭಾರತಕ್ಕೂ ಶುರುವಾಗಿದೆ.
ಈ ಹೊಸ ಮಾರಣಾಂತಿಕ ಸೋಂಕಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಮೊದಲ ಸೋಂಕು ಪತ್ತೆಯಾಗಿತ್ತು. ಬೆಳಗ್ಗೆ ಕರ್ನಾಟಕದ ಬೆಂಗಳೂರಿನಲ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದ 3 ಮತ್ತು 8 ತಿಂಗಳ ಎರಡು ಮಕ್ಕಳಲ್ಲಿ ಈ ವೈರಸ್ ದೃಢಪಟ್ಟಿತ್ತು. ನಂತರ ಗುಜರಾತ್ ನ ಅಹಮದಾಬಾದ್ನಲ್ಲಿ 2 ವರ್ಷದ ಮಗುವಿಗೆ ಎಚ್ಎಂಪಿವಿ ತಗುಲಿರುವುದು ಪತ್ತೆಯಾಗಿತ್ತು. ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ 5 ತಿಂಗಳ ಮಗುವಿನಲ್ಲೂ ವೈರಸ್ ಪತ್ತೆಯಾಗಿದೆ. ತಮಿಳುನಾಡಿನ ಚೆನ್ನೈನಲ್ಲಿ ಇಬ್ಬರು ಮಕ್ಕಳಲ್ಲಿ ಎಚ್ಎಂಪಿವಿ ಸೋಂಕು ಇರುವುದು ತಿಳಿದು ಬಂದಿದೆ.
ಬೆಂಗಳೂರು, ಅಹಮದಾಬಾದ್, ಕೊಲ್ಕತ್ತಾ, ಚೆನ್ನೈನಲ್ಲಿ HMPV ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ನಿಂದ ಎಚ್ಚರಿಕೆ ನೀಡಿದೆ. ಹೀಗಾಗಿ ICMR ಪ್ರಕಟಣೆ ಹೊರಡಿಸಿದೆ.
ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಎರಡು ಮತ್ತು ಅಹಮದಾಬಾದ್ ನಲ್ಲಿ ಒಂದು, ಕೊಲ್ಕತ್ತಾದಲ್ಲಿ 1 ಹಾಗೂ ಚೆನ್ನೈನಲ್ಲಿ 2 ಪ್ರಕರಣ ವರದಿಯಾಗಿವೆ. ಕೆಮ್ಮು, ಜ್ವರ, ಶೀತ, ಉಸಿರುಕಟ್ಟಿಕೊಳ್ಳುವ ಮೂಗು, ನೋಯುತ್ತಿರುವ ಗಂಟಲು, ಉಬ್ಬಸ, ಉಸಿರಾಟದ ತೊಂದರೆ (ಡಿಸ್ಪ್ನಿಯಾ), ದದ್ದು ಈ ವೈರಸ್ ನ ಲಕ್ಷಣವಾಗಿದೆ.