ಬೆಂಗಳೂರು: ತನ್ನ 14 ವರ್ಷದ ಮಗನನ್ನು ಬ್ಯಾಟ್ ನಿಂದ ಹೊಡೆದು ತಂದೆಯೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತೇಜಸ್ ಕೊಲೆಯಾದ ದುರ್ದೈವಿ. ತೇಜಸ್ ತಂದೆ ರವಿಕುಮಾರ್ (44) ಕೊಲೆ ಮಾಡಿರುವ ಆರೋಪಿ.
ಮಗ ತೇಜಸ್ ಶಾಲೆಗೆ ಹೋಗದೆ, ಮನೆಯಲ್ಲೇ ಇರುತ್ತಿದ್ದ. ಬರೀ ಮೊಬೈಲ್ ನಲ್ಲೇ ಕಾಲ ಕಳೆಯುತ್ತಿದ್ದ. ಸ್ನೇಹಿತರೊಂದಿಗೆ ಹೊರ ಹೋಗುತ್ತಿದ್ದ ಆತ ತಡರಾತ್ರಿಯಾದರೂ ಮನೆಗೆ ವಾಪಸ್ಸಾಗುತ್ತಿರಲಿಲ್ಲ. ಪೋಷಕರು ಹಲವು ಸಲ ಬುದ್ಧಿ ಹೇಳಿದರೂ ಕೇಳಿರಲಿಲ್ಲ. ಹೀಗಾಗಿ ಶುಕ್ರವಾರ ಕೂಡ ಪಾಲಕರು ಶಾಲೆಗೆ ಹೋಗುವಂತೆ ಹೇಳಿದ್ದಾರೆ. ಆದರೆ, ತನ್ನ ಮೊಬೈಲ್ ಕೆಟ್ಟು ಹೋಗಿದ್ದು ರಿಪೇರಿ ಮಾಡಿಸಿಕೊಟ್ಟರಷ್ಟೇ ಶಾಲೆಗೆ ಹೋಗುವುದಾಗಿ ಹಠ ಹಿಡಿದಿದ್ದಾನೆ. ಇದರಿಂದ ಸಿಟ್ಟಿಗೆದ್ದ ರವಿಕುಮಾರ್, ಮನೆಯಲ್ಲಿದ್ದ ಕ್ರಿಕೆಟ್ ಬ್ಯಾಟ್ ನಿಂದ ತೇಜಸ್ ಬೆನ್ನಿಗೆ ನಾಲ್ಕೈದು ಬಾರಿ ಹೊಡೆದು, ಗೋಡೆಗೆ ಚಚ್ಚಿದ್ದಾರೆ.
ನಂತರ ರೂಮ್ ನಲ್ಲಿ ಕೂಡಿ ಹಾಕಿದ್ದಾರೆ. ಆಗ ತೇಜಸ್ ನೋವಿನಿಂದ ನರಳಾಡಿದ್ದಾನೆ. ಗಮನಿಸಿದ ಪಾಲಕರು ಕೂಡ ಆಸ್ಪತ್ರೆಗೆ ಕೆರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಆದರೆ, ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.