ಸ್ಯಾಂಡಲ್ ವುಡ್ ನಲ್ಲಿ ಸದ್ಯ ನಟ ಮಡೆನೂರು ಮನು ಅವರದ್ದೇ ಮಾತು. ಕಿರುತೆರೆ ನಟಿ ಬಿಡುಗಡೆ ಮಾಡಿರುವ ಆಡಿಯೋ ಮೂಲಕ ಇದೀಗ ಸ್ಟಾರ್ ನಟರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಇಂಡಸ್ಟ್ರೀಯಿಂದ ಬ್ಯಾನ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನಟಿ ಮೇಲಿನ ಅತ್ಯಾಚಾರ ಆರೋಪ ಎದುರಿಸುತ್ತಿರುವ ಮನು ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಸಂತ್ರಸ್ಥೆಯ ದೂರಿನ ಆಧಾರದ ಮೇಲೆ ಮಡೆನೂರು ಮನು ಜೈಲು ಸೇರಬೇಕಾಯಿತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟರ ಬಗ್ಗೆ ಹಗುರವಾಗಿ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ಈ ಕುರಿತಾಗಿ ಮೇ 27 ರಂದು ಬೆಳಗ್ಗೆ 11:30ಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಬಗ್ಗೆ ನಡೆಯಲಿದೆ. ಈ ವೇಳೆ ಕನ್ನಡ ಚಿತ್ರರಂಗದ ಎಲ್ಲಾ ನಿರ್ದೇಶಕರು , ಸಂಘದ ಕಲಾವಿದರು ಹೀಗೆ ವಿವಿಧ ವಿಭಾಗದ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಂತ್ರಸ್ಥ ನಟಿ ರಿಲೀಸ್ ಮಾಡಿರುವ ಆಡಿಯೋದಲ್ಲಿ ಮಡೆನೂರು ಮನು ಸ್ಟಾರ್ ನಟರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ , ಪ್ರಿನ್ಸ್ ಧ್ರುವ ಸರ್ಜಾ ಬಗ್ಗೆ ಕೇವಲವಾಗಿ ಮಾತನಾಡಿರುವ ಮಡೆನೂರು ಮನುಗೆ ಬಿಸಿ ಮುಟ್ಟಿಸಲು ಕನ್ನಡ ಚಿತ್ರರಂಗ ಬ್ಯಾನ್ ಮಾಡುವ ನಿರ್ಧಾರದಲ್ಲಿದೆ.
ಮಡೆನೂರು ಮನು ಖಾಸಗಿ ಚಾನಲ್‌ನಲ್ಲಿ ಕಾಮಿಡಿ ಕಿಲಾಡಿಗಳು ಸೀಸನ್ 2 ಕಾರ್ಯಕ್ರಮದಲ್ಲಿ ವಿನ್ನರ್ ಆಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡುವ ಮೂಲಕ ಹೀರೋ ಆಗಿ ಎಂಟ್ರಿ ಆಗ್ತಾರೆ. ಈಗಾಗಲೇ ಈ ಸಿನಿಮಾ ಬಿಡುಗಡೆಯಾಗಿದೆ.
ಇನ್ನು ಸಂತ್ರಸ್ಥ ಕಿರುತೆರೆ ನಟಿ ತನ್ನ ಆಡಿಯೋವನ್ನು ತನ್ನ ಅಕೌಂಟ್ ಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ . ಜೊತೆಗೆ ಮಡೆನೂರು ಮನು ಫೋಟೋ ಹಾಕಿ ದುರಹಂಕಾರ ಅಂತ ಕಿರುತೆರೆ ನಟಿ ಕ್ಯಾಪ್ಶನ್ ಕೊಟ್ಟಿದ್ದಾರೆ. ಇನ್ನು ನಟರ ಬಗ್ಗೆ ಹಗುರವಾಗಿ ಮಾತನಾಡಿದ ಮಡೆನೂರು ಮನು, ಶಿವರಾಜಕುಮಾರ್ ಇನ್ನೊಂದು ಆರು ವರ್ಷ ಸತ್ತು ಹೋಗ್ತಾರೆ. ಧ್ರುವ ಸರ್ಜಾ ಇನ್ನು ಎಂಟು ವರ್ಷ, ದರ್ಶನ್ ಸರ್ ಇನ್ನೊಂದು ಆರು ವರ್ಷ ಕ್ರೇಜ್ ಇರುತ್ತದೆ ಎಂದು ಟೀಕೆ ಮಾಡಿದ್ದಾರೆ.