ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಎಲ್ಲರೂ ಕೂಡ ಹುಬ್ಬೇರಿಸುವಂತೆ ಮಾಡಿದ ಜೋಡಿ ಅಂದ್ರೆ ಭವ್ಯಗೌಡ ಹಾಗೂ ತ್ರಿವಿಕ್ರಮ್. ಈ ಜೋಡಿ ಸಾಕಷ್ಟು ಫ್ಯಾನ್ ಫಾಲೋವರ್ಸ್ ಹುಟ್ಟಿಕೊಂಡಿದ್ದರು. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ಇಬ್ಬರೂ ಕೂಡ ಪ್ರೀತಿಯಲ್ಲಿ ಬಿದ್ದಿದ್ದರೂ ಎನ್ನುವಂತಹ ಒಂದಿಷ್ಟು ಊಹಾಪೋಹಗಳಿಗೆ ಸಾಕ್ಷಿಯಾಗಿದ್ದರು. ಭವ್ಯಗೌಡ, ತ್ರಿವಿಕ್ರಂ ಅವರ ಜೊತೆ ಜಾಸ್ತಿಯಾಗಿ ಸಮಯ ಕಳೆಯುತ್ತಿರುವುದು ಕೂಡ ಇದಕ್ಕೆ ಸಾಕ್ಷಿಯಾಗಿತ್ತು.
ಇಬ್ಬರೂ ಓಪನ್ ಆಗಿ ಮಾತನಾಡುತ್ತಿದ್ದರು. ಎಲ್ಲ ವಿಷಯಗಳನ್ನು ಭವ್ಯಗೌಡ ಅವರ ಜೊತೆಯೇ ಶೇರ್ ಮಾಡಿಕೊಳ್ಳುತ್ತಿದ್ದರು. ಇದರಿಂದ ಭವ್ಯಗೌಡ ಅವರು ತ್ರಿವಿಕ್ರಮ್ ಗೆ ಹತ್ತಿರವಾಗಿದ್ದರು. ತ್ರಿವಿಕ್ರಂ ಹಾಗೂ ಭವ್ಯ ಗೌಡ ಅವರ ಜೊತೆ ಅವರಿಬ್ಬರ ಫ್ಯಾನ್ಸ್ ಕೂಡ ಕೂಡ ಕೊಂಡಾಡುತ್ತಿದ್ದರು. ನಂತರ ಬಿಗ್ ಬಾಸ್ ಕೊನೆಯ ಹಂತ ತಲುಪುವ ಸಮಯದಲ್ಲಿ ಭವ್ಯ ಗೌಡ ಮನೆಯಿಂದ ಔಟ್ ಆಗಿದ್ದರು. ನಂತರ ತ್ರಿ ವಿಕ್ರಂ ಅವರು ಬಿಗ್ ಬಾಸ್ ಸೀಸನ್ 11ರ ರನ್ನರ್ ಆಗಿದ್ದರು.
ಬಿಗ್ ಬಾಸ್ ಶೋ ಮುಗಿಸಿದ ನಂತರ ಇಬ್ಬರೂ ಕೂಡ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಅದೇನೆಂದರೆ ಭವ್ಯ ಗೌಡ ಅವರು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕರ್ಣ ಎನ್ನುವಂತಹ ಸೀರಿಯಲ್ ಗೆ ನಾಯಕಿಯಾಗಿದ್ದಾರೆ. ಜೊತೆಗೆ ತ್ರಿವಿಕ್ರಮ್ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಮುದ್ದು ಸೊಸೆ ಎನ್ನುವಂತಹ ಸೀರಿಯಲ್ ಗೆ ನಾಯಕನಾಗಿ ಎಂಟ್ರಿ ಕೊಡಲಿದ್ದಾರೆ. ಹೀಗಾಗಿ ತ್ರಿವ್ಯಾ ಜೋಡಿಗೆ ಸೀರಿಯಲ್ ಅವಕಾಶಗಳು ಹುಡುಕಿಕೊಂಡು ಬಂದಿವೆ. ಇಬ್ಬರೂ ಕೂಡ ಮುಖ್ಯ ಭೂಮಿಕೆಯಲ್ಲಿ ಮತ್ತೆ ಪ್ರೇಕ್ಷಕರನ್ನು ಮನರಂಜಿಸಲು ಫುಲ್ ರೆಡಿಯಾಗಿದ್ದಾರೆ. ಈ ವಿಷಯ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.