ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಆಕ್ಷೇಪಾರ್ಹ ಪದಗಳಿಂದ ನಿಂದಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ, ಬಿಜೆಪಿ ಶಾಸಕ ಸಿ.ಟಿ. ರವಿ ಬಂಧನವಾಗಿ ಬಿಡುಗಡೆಯಾಗಿದ್ದಾರೆ. ಘಟನೆಯ ಸಂದರ್ಭದಲ್ಲಿ ಸುವರ್ಣಸೌಧಕ್ಕೆ ನುಗ್ಗಿ, ಸಿ.ಟಿ. ರವಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದನ್ನು ಗಂಭೀರವಾಗಿ ಪರಿಗಣಿಸಿರುವ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಎಂಬ ಸಂಸ್ಥೆಯು, ರಾಜ್ಯಪಾರಿಗೆ ಲಿಖಿತ ದೂರು ನೀಡಿದೆ.
“ಸುವರ್ಣ ಸೌಧದಂತಹ ಸ್ಥಳದಲ್ಲಿ ಜನಪ್ರತಿಯೋರ್ವರನ್ನು ಮನಬಂದಂತೆ ಥಳಿಸಲು ಮುಂದಾದ ಆ ಘಟನೆಯು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿರುವುದಕ್ಕೆ ಸಾಕ್ಷಿ” ಎಂದು ಆರೋಪಿಸಿರುವ ಸಂಸ್ಥೆಯು, ಪ್ರಕಣ ಸಂಬಂಧಿಸಿದಂತೆ ಆರೋಪಿ ಎಂದು ಪರಿಗಣಿಸಿರುವ ಸಿ.ಟಿ. ರವಿಯವರನ್ನು ಬಂಧಿಸಿದಂತೆ, ಅವರ ಮೇಲೆ ಹಲ್ಲೆಗೆ ಮುಂದಾದವರ ಮೇಲೆ ಯಾಕೆ ಕ್ರಮ ಜರುಗಿಸಿಲ್ಲ? ಎಂದು ಪ್ರಶ್ನಿಸಿದೆ. ಹಾಗೆಯೇ ಮುಂದುವರೆದು, “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿರುವ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು” ಎಂದು ಆಗ್ರಹಿಸಿದೆ.
ಈ ಸಂಬಂಧ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಸಂಸ್ಥೆಯು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ನೇರ ದೂರು ನೀಡಿದೆ.