ರಸ್ತೆಯಲ್ಲಿ ಮಲಗಿದ್ದ ಶ್ವಾನದ ಮೇಲೆ ಕಾರು ಹರಿಸಿ ಹತ್ಯೆ ಮಾಡಿರುವ ಅಮಾನುಷ ಘಟನೆಯೊಂದು ನಡೆದಿದೆ.
ಈ ಘಟನೆ ಬೆಂಗಳೂರಿನ(bengalore) ಜೆಪಿ ನಗರದ ಶೇಖರ್ ಲೇಔಟ್ (Shekhar Layout)ನಲ್ಲಿ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಥಾರ್ ವಾಹನದಲ್ಲಿ ಬಂದ ಪಾಪಿಯೊಬ್ಬ ಮಲಗಿದ್ದ ಶ್ವಾನದ ಮೇಲೆ ಬೇಕಂತಲೇ ಕಾರು ಹರಿಸಿದ್ದಾನೆ. KA02MS 2781 ನಂಬರ್ ಥಾರ್ ವಾಹನ ನಾಯಿಯ ಮೇಲೆ ಹರಿದಿದೆ. ಸದ್ಯ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಾರು ಮಾಲೀಕನ ವಿರುದ್ಧ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಘಟನೆ ಡಿ. 31ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಮಾನವೀಯವಾಗಿ ಶ್ವಾನದ ಮೇಲೆ ಕಾರು ಚಲಾಯಿಸಿರುವ ಕಿರಾತಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ (social media)ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.