ಬೆಂಗಳೂರು : ಬೈಕ್‌ಗೆ ಗುದ್ದಿ ಕಿಲೋಮೀಟರ್ ಗಟ್ಟಲೆ ಕಾರು ಚಾಲಕ ರಸ್ತೆ ಮೇಲೆ ಬೈಕ್ ಎಳೆದೊಯ್ದ ಘಟನೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾರು ಚಾಲಕ ಶಿವಕುಮಾರ್. ಔಟರ್ ರಿಂಗ್ ರೋಡ್ ನಲ್ಲಿ ಈತನ ಅಜಾಗರೂಕ ಚಾಲನೆಯಿಂದ ರಸ್ತೆ ಬದಿ ನಿಂತಿದ್ದಾಗ ಬೈಕ್ ಗುದ್ದಿ ರಸ್ತೆಗೆ ಉಜ್ಜಿಕೊಂಡು ಹೋಗಿದ್ದಾನೆ. ಸುಮಾರು 2 ಕಿಮೀವರೆಗೆ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ.
ಫೋನ್ ಬಂತು ಎಂದು ಬೈಕ್ ಸವಾರ ಬೈಕ್ ಸ್ಲೋ ಮಾಡಿದ್ದನು. ಹಿಂದೆ ಬರುತ್ತಿದ್ದ ಕಾರು ಸವಾರ ಕುಡಿದ ಮತ್ತಿನಲ್ಲಿ ಸವಾರ ಸಿಲುಕಿರುವುದು ತಿಳಿಯದೇ ಎಳೆದೊಯ್ದಿದ್ದಾನೆ. ಅದೃಷ್ಟಾವಶಾತ್ ಬೈಕ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು,ಚಿಕ್ಕಪುಟ್ಟ ಗಾಯಗಳಾಗಿವೆ.ಸದ್ಯ ಪ್ರಕರಣ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ನರ್ಸ್ ಬಟ್ಟೆ ಬದಲಿಸುವಾಗ ಕದ್ದುಮುಚ್ಚಿ ವಿಡಿಯೋ | ಖಾಕಿ ಕೈಗೆ ಸಿಬ್ಬಂದಿ ಲಾಕ್


















