ಉಡುಪಿ | ಸಿಎಂ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್ ಮಂಡನೆ ಮಾಡಿದ್ದಾರೆ. ಈ ಮೂಲಕ ಅವರು ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ. ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದು ಜನಪರವಾದ ಬಜೆಟ್ ಎಂದು ಆಡಳಿತ ಪಕ್ಷ ಮೆಚ್ಚುಗೆ ಸೂಚಿಸದರೆ, ಸರ್ವರಿಗೂ ತೆರಿಗೆ, ಸರ್ವರಿಗೂ ಸಾಲದ ಬಜೆಟ್ ಇದಾಗಿದೆ ಎಂದು ವಿಪಕ್ಷ ಟೀಕಿಸಿದೆ.
ಇದೀಗ ಸಿದ್ದರಾಮಯ್ಯನವರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಕಿದಿಯೂರು ಉದಯಕುಮಾರ್ ಶೆಟ್ಟಿ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಬಜೆಟ್ ಕರಾವಳಿಗರಿಗೆ ಯಾವುದೇ ಸಂತೋಷ ನೀಡಿಲ್ಲ, ಕರಾವಳಿ ಸಾಕಷ್ಟು ಅನುದಾನ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದ್ರೆ ಸರ್ಕಾರ ಮಲತಾಯಿ ಧೋರಣೆ ತೋರಿಸಿದೆ ಎಂದು ಹೇಳಿದ್ದಾರೆ.
ಕರಾವಳಿ ಅನುದಾನ ನೀಡುವುದಕ್ಕೆ ಸಿಎಂ ಯಾವುದೇ ಆಸಕ್ತಿ ತೋರಿಸಿಲ್ಲ, ಯುವ ನಿಧಿಗೆ ಸಾಕಷ್ಟು ಅನುದಾನ ನೀಡಬಹುದು ಎಂಬ ನಿರೀಕ್ಷೆ ಇತ್ತು, ಅದ್ರೆ ಅದು ಕೂಡ ಹುಸಿಯಾಗಿದೆ. ಈ ಬಾರಿ ಕರಾವಳಿ ಜನರಿಗೆ ಬಜೆಟ್ ನಿರಾಸೆಯನ್ನೇ ಕಟ್ಟಿಕೊಟ್ಟಿದೆ ಎಂದು ಬಿಜೆಪಿ ಮುಖಂಡ ಕಿದಿಯೂರು ಉದಯಕುಮಾರ್ ಶೆಟ್ಟಿ ಹೇಳಿದ್ಧಾರೆ.
ಇದನ್ನೂ ಓದಿ : ಅಭಿಷೇಕ್ ಶರ್ಮಾ ಮತ್ತೆ ಫೇಲ್.. ಅಭಿಮಾನಿಗಳಲ್ಲಿ ನಿರಾಶೆ!



















