ಕಲ್ಯಾಣ ಮಂಟಪದಲ್ಲಿ ಆಗಾಗ ಕಿರಿಕ್ ಗಳು ನಡೆಯುತ್ತಿದ್ದ ಪ್ರಕರಣ ಬೆಳಕಿಗೆ ಬರುತ್ತಲೇ ಇದ್ದವು. ಈಗ ವಧುವಿನ ಮಾಜಿ ಪ್ರಿಯಕರ, ವರನನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.
ರಾಜಸ್ಥಾನ್ ಚಿತ್ತೋರ್ ಗಢ ಜಿಲ್ಲೆಯ ಭಿಲ್ವಾರದಲ್ಲಿ ಈ ಘಟನೆ ನಡೆದಿದೆ. ವಧು- ವರರಿಗೆ ಶುಭಾಶಯ ತಿಳಿಸುವ ನೆಪದಲ್ಲಿ ಸ್ಟೇಜ್ ಹತ್ತಿದ ವಧುನಿನ ಮಾಜಿ ಪ್ರಿಯಕರ, ವರನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಅದೃಷ್ಟವಶಾತ್ ವರನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಆರೋಪಿ ಶಂಕರ್ ಲಾಲ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಧು ಮತ್ತು ಶಂಕರ್ ಲಾಲ್ ಎರಡು ವರ್ಷಗಳ ಹಿಂದೆ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಆ ವೇಳೆ ಗೆಳೆತನ ಬೆರೆತಿತ್ತು. ಆದರೆ, ನಂತರ ಬ್ರೇಕ್ ಅಪ್ ಆಗಿತ್ತು. ಈ ಮಧ್ಯೆ ಮಾಜಿ ಗೆಳತಿಯ ಮದುವೆಗೆ ಬಂದು ಆರೋಪಿ, ಹಲ್ಲೆ ಮಾಡಿದ್ದಾನೆ.
ಹಲ್ಲೆ ಮಾಡುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. @gharkekalesh ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.