ಮೈಸೂರು: ಲಾರಿ ಹಾಗೂ ಬೈಕ್ (Bike) ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಸವಾರನ ರುಂಡ ಹಾರಿ ಹೋಗಿರುವ ಭಯಾನಕ ಘಟನೆ ನಡೆದಿದೆ.
ಈ ಘಟನೆ ಮೈಸೂರು (Mysuru) ಜಿಲ್ಲೆಯ ಗೊರಹಳ್ಳಿ ಕೆರೆ ಏರಿಯ ಮೇಲೆ ನಡೆದಿದೆ. ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಶೇಖರ್ (26) ಹಾಗೂ ಶಂಕರ್ (25) ಸಾವನ್ನಪ್ಪಿದ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಬೆಟ್ಟದಪುರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವನ್ನಪ್ಪಿದವರನ್ನು ಪಿರಿಯಾಪಟ್ಟಣ ತಾಲೂಕಿನ ಹಿಟ್ನೆಬಾಗಿಲು ಗ್ರಾಮದ ಯುವಕರು ಎಂದು ಗುರುತಿಸಲಾಗಿದೆ.