ಗೋಲ್ಡ್ ಸ್ಮಗ್ಲಿಂಗ್‌ನಲ್ಲಿ ಅರೆಸ್ಟ್ ಆಗಿರುವ ನಟಿ ರನ್ಯಾ ರಾವ್ ಮುಖವಾಡ ಬಯಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಆರ್‌ಐ ಅಧಿಕಾರಿಗಳು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
ಪ್ರಕರಣ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅಧಿಕಾರಿಗಳು, ಗೋಲ್ಡ್ ಸ್ಮಗ್ಲಿಂಗ್ ನಲ್ಲಿ ಇದೇ ಅತಿ ದೊಡ್ಡ ಭೇಟೆ ಎಂದು ಹೇಳಇದ್ದಾರೆ. ಇಲ್ಲಿಯವರೆಗೆ ಒಟ್ಟು 17.29 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ. ಏರ್‌ಪೋರ್ಟ್ ನಲ್ಲಿ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ಚಿನ್ನ, ಮನೆಯಲ್ಲಿ 2.06 ಕೋಟಿ ರೂ. ಮೌಲ್ಯದ ಚಿನ್ನ, ಬೆಂಗಳೂರಿನ ಮನೆಯಲ್ಲಿ 2.67 ಕೋಟಿ ರೂ. ನಗದು ಹಣ ಸಿಕ್ಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಟಿ ದುಬೈನಿಂದ ಬೆಂಗಳೂರಿನ ಏಪ್‌ಪೋರ್ಟ್‌ಗೆ ನಟಿ ಬಂದಿದ್ದರು. 1 ಕೆಜಿ ತೂಗುವ 14 ಗೋಲ್ಡ್ ಬಿಸ್ಕೆಟ್ ತಂದಿದ್ದರು. ತೊಡೆಯ ಭಾಗಕ್ಕೆ 14 ಬಿಸ್ಕೆಟ್‌ಗಳನ್ನು ಗಮ್ ಹಾಕಿ ಅಂಟಿಸಿಕೊಂಡಿದ್ದರು. ನಂತರ ಟೇಪ್ ನ್ನು ಬಲವಾಗಿ ಸುತ್ತಿಕೊಂಡಿದ್ದರು. ಟೇಪ್ ಮೇಲೆ ಕ್ರೆಪೆ ಬ್ಯಾಂಡೇಜ್ ಸುತ್ತಿಕೊಂಡಿದ್ದರು. ಯಾವುದೇ ಸ್ಕ್ಯಾನರ್ ಅಲ್ಲಿ ಅನುಮಾನ ಬಾರದಂತೆ ಕ್ರೆಪೆ ಬ್ಯಾಂಡೇಜ್ ಹಾಕಿಕೊಂಡಿದ್ದರು ಎಂಬುವುದು ತನಿಖೆಯ ವೇಳೆ ಪತ್ತೆಯಾಗಿದೆ.
ಸ್ಯಾಂಡಲ್‌ವುಡ್‌ನಲ್ಲಿ ಕ್ಲಿಕ್ ಆಗ್ಬೇಕು ಅಂದ್ರೆ ಒಳ್ಳೆಯ ಹೆಸರು ಇರಬೇಕು. ಒಳ್ಳೆಯ ಹೆಸರು ಬರಬೇಕು ಅಂದ್ರೆ ‘ರ’ ಅಕ್ಷರವೇ ಆಗಿರಬೇಕು ಎಂದು ತನ್ನ ಹೆಸರನ್ನೇ ರನ್ಯಾ ಬದಲಾಯಿಸಿಕೊಂಡಿದ್ದರು. ಆದರೆ, ರನ್ಯಾ ಮೂಲ ಹೆಸರು ಹರ್ಷವರ್ದಿನಿ ಯಜ್ಞೇಶ್. ಮಾಣಿಕ್ಯ ಚಿತ್ರದಗಲ್ಲಿ ಅಭಿನಯಿಸುವುದಕ್ಕಾಗಿ ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದರು. ‘ರ’ ಪದದಿಂದ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರೆ ಒಳ್ಳೆ ಹೆಸರು ಬರುತ್ತೆ. ಈಗಾಗಲೇ `ರ’ ಹೆಸರಿನ ನಟಿಯರು ತುಂಬಾ ಒಳ್ಳೆಯ ಹೆಸರು ಮಾಡಿದ್ದಾರೆ ಎಂದು ಭಾವಿಸಿದ್ದರು. ಆದರೆ, ಅವರ ಹೆಸರು ಈಗ ಸ್ಯಾಂಡಲ್ ವುಡ್ ಗಿಂತ, ಸ್ಮಗ್ಲಿಂಗ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.