ಗದಗ: ಮೆಕ್ಕೆಜೋಳ (Maize) ರಾಶಿ ಮಾಡುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕನಿಗೆ ಕಾರು ಗುದ್ದಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಗದಗ (Gadaga) ತಾಲೂಕಿನ ಲಕ್ಕುಂಡಿ (Lakkundi) ಹತ್ತಿರದ ರಾಷ್ಟ್ರೀಯ ಹೆದ್ದಾರಿ 67ನಲ್ಲಿ ನಡೆದಿದೆ. ಕೂಲಿ ಕೆಲಸ ಮಾಡುತ್ತಿದ್ದ ಕಲ್ಲಪ್ಪ ಕಲ್ಲೂರ್ (25) ಸಾವನ್ನಪ್ಪಿರುವ ದುರ್ದೈವಿ. ಕಾರ್ಮಿಕನು ಮೆಕ್ಕೆಜೋಳ ರಾಶಿ ಮಾಡಲು ಆಗಮಿಸಿದ್ದ. ಹೈವೆ ಪಕ್ಕ ಮೆಕ್ಕೆಜೋಳ ರಾಶಿ ಮಾಡುತ್ತಿದ್ದಾಗ ಗದಗದಿಂದ ಕೊಪ್ಪಳ (Koppala) ಕಡೆಗೆ ಹೋಗುವ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.