ಭಾರೀ ಅಭಿಮಾನಿಗಳನ್ನು ಹೊಂದಿರುವ ದಳಪತಿ ವಿಜಯ್ ಹೊಸ ಸಿನಿಮಾ ಘೋಷಣೆ ಮಾಡುತ್ತಾರೆಂದರೆ ಸಾಕು ಅಭಿಮಾನಿಗಳು ಹಬ್ಬದ ರೀತಿ ಸಂಭ್ರಮಿಸುತ್ತಾರೆ. ಅದೇ ರೀತಿ ದಳಪತಿ ಇಂದು ಹೊಸ ಸಿನಿಮಾ ಘೋಷಣೆ ಮಾಡಿದ್ದು, ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.
ವಿಜಯ್ ತಮ್ಮ 69ನೇ ಸಿನಿಮಾ ಘೋಷಣೆ ಮಾಡಿದ್ದು, ಕನ್ನಡದ ನಿರ್ಮಾಣ ಸಂಸ್ಥೆಯಾಗಿರುವ ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಲಿದೆ. ಸಿನಿಮಾ ಘೋಷಣೆಯನ್ನು ವಿಜಯ್ ಹಿಂದೆ ನಟಿಸಿದ್ದ ಸಿನಿಮಾಗಳ ವಿಡಿಯೋ ತುಣುಕು ತೋರಿಸಿ ಮಾಡಲಾಗಿತ್ತು. ಆದರೆ, ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇದು ವಿಜಯ್ ಅವರ 69ನೇ ಸಿನಿಮಾ ಹಾಗೂ ಕೊನೆಯ ಸಿನಿಮಾ ಎನ್ನಲಾಗುತ್ತಿದೆ. ವಿಜಯ್ ರಾಜಕಾರಣಕ್ಕೆ ಧುಮುಕಲು ಮುಂದಾಗಿದ್ದಾರೆ. ಹೀಗಾಗಿ ಅವರು ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಗೆ ತಯಾರಾಗುತ್ತಿದ್ದಾರೆ. ಸಿನಿಮಾ ಲೋಕಕ್ಕೆ ಅಂತ್ಯ ಹಾಡಿ ಸಕ್ರಿಯ ರಾಜಕೀಯಕ್ಕೆ ಧುಮುಕಲಿದ್ದಾರೆ. ಹೀಗಾಗಿ ಇದೇ ಕೊನೆಯ ಚಿತ್ರ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು, ಹೊಸ ಸಿನಿಮಾ ಘೋಷಣೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಿನಿಮಾದಲ್ಲಿ ವಿಜಯ್, ನಟಿ ಸಿಮ್ರನ್ ಜೊತೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿಮ್ರನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಎಚ್ ವಿನೋದ್ ನಿರ್ದೇಶನ ಮಾಡಲಿದ್ದಾರೆ.