ಭಾರತ ಹಾಗೂ ನ್ಯೂಜಿಲೆಂಡ್ ಮಧ್ಯೆ ಇಂದಿನಿಂದ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಆದರೆ, ಮೊದಲ ದಿನ ಮಳೆಗೆ ಆಹುತಿಯಾಗಿದೆ. ಈ ಪಂದ್ಯ ಟೆಸ್ಟ್ ಶ್ರೇಯಾಂಕ ಪ್ರಕಟವಾಗಿದ್ದು, ಈ ಬಾರಿ ಭಾರತೀಯರಿಗೆ ಹಿನ್ನಡೆಯಾಗಿದೆ. ನ್ಯೂಜಿಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಮೇಲೆ ಬರಲು ಈಗ ಭಾರತೀಯ ಆಟಗಾರರು ಮುಂದಾಗಿದ್ದಾರೆ.
ಪಾಕಿಸ್ತಾನ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ದಾಖಲೆಯ ತ್ರಿಶತಕ ಸಿಡಿಸಿದ್ದ ಇಂಗ್ಲೆಂಡ್ ಸ್ಫೋಟಕ ಬ್ಯಾಟ್ಸಮನ್ ಹ್ಯಾರಿ ಬ್ರೂಕ್ ಪಟ್ಟಿಯಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಟ್ರಿಪಲ್ ಸೆಂಚುರಿ ಸಿಡಿಸಿದ್ದ ಹ್ಯಾರಿ ಬ್ರೂಕ್, ಬರೋಬ್ಬರಿ 11 ಸ್ಥಾನ ಮೇಲೇರಿ ಜಂಟಿಯಾಗಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ 13ನೇ ಸ್ಥಾನದಲ್ಲಿದ್ದ ಬ್ರೂಕ್ ಈಗ ಟಾಪ್ ಎರಡಕ್ಕೆ ಲಗ್ಗೆಯಿಟ್ಟಿದ್ದಾರೆ.
ಬ್ರೂಕ್ ಟಾಪ್ 10 ರೊಳಗೆ ಎಂಟ್ರಿಕೊಡುವುದರೊಂದಿಗೆ ಭಾರತೀಯ ಆಟಗಾರರು ಹಿನ್ನಡೆ ಅನುಭವಿಸಬೇಕಾಗಿದೆ. ಅದರಂತೆ ಭಾರತೀಯ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಅಲ್ಲದೇ, ವಿರಾಟ್ ಕೊಹ್ಲಿ ಕೂಡ ಒಂದು ಸ್ಥಾನ ಕುಸಿತ ಕಂಡಿದ್ದಾರೆ. ಹಿಂದೆ 6ನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಈಗ 7ನೇ ಸ್ಥಾನಕ್ಕೆ ಜಾರಿದ್ದಾರೆ. ಉಳಿದಂತೆ ರಿಷಬ್ ಪಂತ್ 9ನೇ ಸ್ಥಾನದಲ್ಲಿದ್ದಾರೆ.
ಪಾಕಿಸ್ತಾನದ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 262 ರನ್‌ಗಳ ಇನ್ನಿಂಗ್ಸ್ ಆಡಿದ್ದ ಜೋ ರೂಟ್ ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರಿ ಲಾಭ ಗಳಿಸಿದ್ದು, 932 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನ ಭದ್ರ ಪಡಿಸಿಕೊಂಡಿದ್ದಾರೆ. ಕೇನ್ ವಿಲಿಯಮ್ಸ ಕೂಡ ಎರಡನೇ ಸ್ಥಾನದಲ್ಲಿದ್ದಾರೆ.