ನವದೆಹಲಿ: ಭಯೋತ್ಪಾದಕರು ಈಗ ತಮ್ಮ ಮನೆಯಲ್ಲಿ ಇರಲೂ ಭಯ ಪಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಖಾಸಗಿ ಮಾಧ್ಯಮ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಹಲವಾರು ಭಯೋತ್ಪಾದಕ ವಿಧ್ವಂಸಕ ಕೃತ್ಯಗಳು ದೇಶದಲ್ಲಿ ನಡೆದಿವೆ. ಆ ಸಂದರ್ಭದಲ್ಲಿ ಭಯೋತ್ಪಾದನೆ ಜನರನ್ನು ಹೆದರಿಸುತ್ತಿತ್ತು. ಆದರೆ, ಪರಿಸ್ಥಿತಿ ಈಗ ಹಾಗಿಲ್ಲ.
ಯೋತ್ಪಾದಕರು ತಮ್ಮ ಮನೆಯಲ್ಲಿ ಇರಲೂ ಭಯ ಪಡುವ ಸ್ಥಿತಿ ಇದೆ. ಆ ವಾತಾವರಣವನ್ನು ನಾವು ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಹಿಂದಿನ ಸರ್ಕಾರಗಳು ವೋಟ್ ಬ್ಯಾಂಕ್ ಗಾಗಿ ದೇಶಕ್ಕೆ ಆತಂಕ ತರುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಭಯೋತ್ಪಾದಕತೆ ದೇಶದ ಅಸುರಕ್ಷತೆಗೆ ಕಾರಣವಾಗಿತ್ತು. ಆದರೆ, ನಾವು ಮತ ಬ್ಯಾಂಕ್ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಂಡಿಲ್ಲ. ದೇಶದ ಸುಧಾರಣೆಯೊಂದೇ ನಮ್ಮ ಗುರಿ. ನಾವು ಮತ-ಬ್ಯಾಂಕ್ ರಾಜಕೀಯದಿಂದ ದೂರವಿದ್ದೇವೆ. ಮತ್ತು ಜನರಿಂದ ಜನರ ಅಭಿವೃದ್ಧಿಗಾಗಿ ಎಂಬುವುದೇ ನಮ್ಮ ಮಂತ್ರ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯದ ನಂತರ ಸರ್ಕಾರಗಳು ಜನಸಾಮಾನ್ಯರಲ್ಲಿ ಅಪಾಯಗಳನ್ನು ತೆಗೆದುಕೊಳ್ಳಲು ಅಗತ್ಯವಾದ ಶಕ್ತಿಯನ್ನು ತುಂಬಲಿಲ್ಲ. ಆದರೆ ಕಳೆದ ಹತ್ತು ವರ್ಷಗಳಲ್ಲಿ ದೇಶದ ಯುವಕರು ಪ್ರಬಲವಾದ ಅಪಾಯವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.