ಭಾರತ-ಪಾಕ್ ಗಡಿಯಲ್ಲಿ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ರಣಬೇಟೆಯಾಡಿದ್ದಾರೆ.
ಪೂಂಚ್ ವಲಯದ ಸೋನಾರ್ ಕೋಟ್ ವ್ಯಾಪ್ತಿಯಲ್ಲಿ ಉಗ್ರರ ಅಡಗುದಾಣವನ್ನು ಉಡಾಯಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಂಟಿ ಕಾರ್ಯಪಡೆ, ಜಿಹಾದಿಗಳ ಅಡುಗಾಣವನ್ನು ಶೋಧಿಸಿದ್ದಾರೆ.
ಈ ವೇಳೆ, ಅಪಾರ ಪ್ರಮಾಣದ ಐಇಡಿಯನ್ನು ಜಪ್ತು ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಎರಡು ರೇಡಿಯೋ ಸೆಟ್ ಹಾಗೂ ಮೂರು ಹೊದಿಕೆಗಳು ಪತ್ತೆಯಾಗಿವೆ. ಪೂಂಚ್ ಸೆಕ್ಟರ್ ನಲ್ಲೇ ಉಗ್ರರು ಅಡಗಿರುವ ಶಂಕೆಯಿದ್ದು, ಕೂಂಬಿಂಗ್ ಮುಂದುವರಿದೆ. ಪಹಲ್ಗಾಮ್ ನರಮೇಧ ಬೆನ್ನಲ್ಲೇ ಕಾಶ್ಮೀರ ಕಣಿವೆಯಲ್ಲಿ ಅತಿದೊಡ್ಡ ಕಾರ್ಯಾಚರಣೆ ನಡೆಸಿರುವ ಸೇನೆ, ಇದೀಗ ದೊಡ್ಡ ಪ್ರಮಾಣದ ಸ್ಫೋಟಕವನ್ನು ವಶಕ್ಕೆ ಪಡೆದಿದೆ. ಈ ಮೂಲಕ ಉಗ್ರರು ಯೋಜಿಸಿದ್ದ ದೊಡ್ಡ ದುರಂತವೊಂದನ್ನು ಸೇನೆ ತಪ್ಪಿಸಿದೆ.