ನೆಲಮಂಗಲ : ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾಗಡಿ ತಾಲೂಕಿನ ರಸ್ತೆ ಪಾಳ್ಯದ ಗಾಂಧಿ ಫಾರಂ ಬಳಿ ನಡೆದಿದೆ.
ಬೆಂಗಳೂರು ಮಾರ್ಗವಾಗಿ ಹಾಸನ ಕಡೆ ಸಾಗುವ ವೇಳೆ ಅಪಘಾತ ನಡೆದಿದೆ. ಅತೀ ವೇಗದಲ್ಲಿ ಬಂದು ರಸ್ತೆಯ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸುರುವ ಸಾಧ್ಯತೆಯಿದ್ದು, ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಬೆಳಗ್ಗೆ ಬೈಕಿನಲ್ಲಿ ಹಾಸನದ ಕಡೆ ಬೈಕ್ ರೈಡ್ ಹೊರಟಿದ್ದ ಬೆಂಗಳೂರು ನಗರದ ನಿವಾಸಿಗಳಾದ ಕೇಶವ ಪ್ರಸಾದ್(21) ಮಯೂರ್( 20) ಮೃತರು. ಮೃತದೇಹಗಳನ್ನು ಈಗ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಇದನ್ನೂ ಓದಿ : 20 ವರ್ಷದ ಯುವತಿಯಿಂದ ನಟಿ ಅನುಪಮಾ ಪರಮೇಶ್ವರನ್ಗೆ ಕಿರುಕುಳ | ದೂರು ದಾಖಲು!



















