ಚಿತ್ತೂರು : ನಿಂತಿದ್ದ ಎಪಿಎಸ್‌ಆರ್‌ಟಿಸಿ ಬಸ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಆಂದ್ರದ ಚಿತ್ತೂರು ಬಳಿಯ ಶೇಷಪುರಂನಲ್ಲಿ ನಡೆದಿದೆ.
ಶ್ರೀಧರ್ ರಾವ್, ಪತ್ನಿ ಲಕ್ಷ್ಮಿ ಮತ್ತು ನಾಲ್ಕು ವರ್ಷದ ಮಗಳು ಆದ್ವಿಕಾ ಈ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದು, ಕಾರು ಚಾಲಕನಿಗೆ ಗಂಭೀರವಾಗಿ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಮೃತರು ಮೂಲತಃ ಆಂದ್ರದ ವಾರಂಗಲ್ ನಿವಾಸಿಗಳಾಗಿದ್ದು, ಬೆಂಗಳೂರಿನಲ್ಲಿ ನೆಲಸಿ ಜೀವನ ನಡೆಸ್ತಿದ್ದರು ಎಂಬ ತಿಳಿದು ಬಂದಿದೆ. ಇಂದು ಕುಟುಂಬಸ್ಥರು ಬೆಂಗಳೂರಿನಿಂದ ತಿರುಮಲಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಬಸ್ ಕೆಳಗೆ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸದ್ಯ ಘಟನಾ ಸ್ಥಳಕ್ಕೆ ಬಂಗಾರುಪಾಳ್ಯ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ‘ಎಣ್ಣೆ ಕೊಟ್ರೆ ಕೆಳಗಿಳಿತೀನಿ’ – ಮೊಬೈಲ್ ಟವರ್ ಏರಿ ಕುಡುಕನ ಹುಚ್ಚಾಟ..!


















