ಬೆಂಗಳೂರು: ಸೀತಾ ರಾಮ ಸೀರಿಯಲ್ ಖ್ಯಾತಿಯ ವೈಷ್ಣವಿ ಗೌಡ ಅದ್ಧೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈ ಜೋಡಿಯ ಫೋಟೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟಿ ನಿಶ್ಚಿತಾರ್ಥದಲ್ಲಿ ಸ್ನೇಹಿತರು, ಸಿನಿಮಾ ಇಂಡಸ್ಟ್ರಿಯವರು ಹಾಗೂ ಆಪ್ತರು ಭಾಗಿಯಾಗಿದ್ದರು. ನಿಶ್ಚಿತಾರ್ಥದ ಫೋಟೋಗಳನ್ನು ಕೂಡ ವೈಷ್ಣವಿ ಗೌಡ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ. ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಫೇಮಸ್ ಆಗಿದ್ದಾರೆ. ವೈಷ್ಣವಿ ಗೌಡ ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಟಿಯಾಗಿದ್ದಾರೆ. ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಅಗ್ನಿಸಾಕ್ಷಿ ಸೀರಿಯಲ್ ಮುಗಿದ ಬಳಿಕ ತನ್ನದೇ ಯೂಟ್ಯೂಬ್ ಚಾನೆಲ್ ಮಾಡಿಕೊಂಡಿದ್ದಾರೆ.
ಸಾಕಷ್ಟು ಮದುವೆ ಆಫರ್ಗಳು ರಿಜೆಕ್ಟ್ ಮಾಡಿದ್ರಂತೆ. ಈಗ ವೈಷ್ಣವಿ ಗೌಡ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಮೆಚ್ಚಿದ ಹುಡುಗ ಜೊತೆ ಎಂಗೇಜ್ ಆಗಿದ್ದಾರೆ.
ವೈಷ್ಣವಿ ಮದುವೆ ಆಗುವ ಹುಡುಗ ಯಾರು?
ವೈಷ್ಣವಿ ಗೌಡ ಅವರು ಮದುವೆ ಆಗುತ್ತಿರುವ ಹುಡುಗ ಯಾರು ಅಂತ ಅಭಿಮಾನಿಗಳು ಹುಡುಕುತ್ತಿದ್ದಾರೆ. ಹುಡುಗನ ಹೆಸರು ಅಕಾಯ್. ಉದ್ಯಮಿಯಾಗಿದ್ದಾರೆ. ನಟಿ ವೈಷ್ಣವಿ ಗೌಡ ಬಣ್ಣದ ಲೋಕದವರನ್ನು ಕೈ ಹಿಡಿಯದೆ ಉದ್ಯಮಿಯನ್ನು ಮದುವೆಯಾಗಲು ರೆಡಿಯಾಗಿದ್ದಾರೆ.
ವೈಷ್ಣವಿ ಗೌಡ ಕನಸಿನಂತೆ ನಿಶ್ಚಿತಾರ್ಥ ನೆರವೇರಿದೆ ಎಂದು ಹೇಳಲಾಗುತ್ತಿದೆ. ಈ ವಿವಾಹಕ್ಕೆ ಆಪ್ತರು ಹಾಗೂ ಕುಟುಂಬದವರು ಮಾತ್ರ ಹಾಜರಾಗಿದ್ದರು. ವೈಷ್ಣವು ವಿವಾಹದ ದಿನಾಂಕ ರಿವೀಲ್ ಆಗಿಲ್ಲ. ಸದ್ಯದಲ್ಲೇ ವೈಷ್ಣವಿ ಗೌಡ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ.



















