ಬೆಂಗಳೂರು : ಸುರಂಗ ಮಾರ್ಗದ ವಿಚಾರವಾಗಿ ಡಿ.ಕೆ ಶಿವಕುಮಾರ್ ವಿರುದ್ಧ ಭಾರೀ ವಾಕ್ಸಮರ ನಡೆಸಿದ್ದ ಸಂಸದ ತೇಜಸ್ವಿ ಸೂರ್ಯ ಇಂದು (ಅ.28) ಬೆಳ್ಳಂಬೆಳಗ್ಗೆ ಡಿಸಿಎಂ ಡಿಕೆಶಿ ಮನೆಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಮಾಧ್ಯಮದವರ ಜತೆ ಮಾತನಾಡದ ತೇಜಸ್ವಿ ಸೂರ್ಯ ಅವರು ಯಾವ ಕಾರಣಕ್ಕಾಗಿ ಈ ಭೇಟಿ ನೀಡಿದ್ದಾರೆ ಎಂಬ ಅಂಶ ತಿಳಿದುಬರಬೇಕಿದೆ.

ಗ್ರೇಟರ್ ಬೆಂಗಳೂರು ಘೋಷಿಸಿದ ಬಳಿಕ ಡಿಕೆ ಶಿವಕುಮಾರ್ ನಗರದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸುತ್ತಿದ್ದು, ಅವುಗಳ ಸಿದ್ಧತೆಗಳಿಗಾಗಿ ಸಾಲು ಸಾಲು ಸಭೆಗಳನ್ನು ನಡೆಸುತ್ತಿದ್ದಾರೆ. ಡಿಕೆ ಶಿವಕುಮಾರ್ ಅವರ ಈ ಯೋಜನೆಗಳ ಪೈಕಿ ಒಂದಾದ ಸುರಂಗ ಮಾರ್ಗ ಸದ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹಾಗೂ ವಿವಾದಗಳನ್ನು ಹುಟ್ಟುಹಾಕಿದೆ.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ಕುರಿತು ಡಿಕೆ ಶಿವಕುಮಾರ್ ಅವರ ವಿರುದ್ಧ ಕಿಡಿಕಾರಿ ಸುರಂಗ ಮಾರ್ಗದ ಯೋಜನೆಯಿಂದ ಲಾಲ್‌ಬಾಗ್‌ನ ಐತಿಹಾಸಿಕ ಬಂಡೆಗಳಿಗೆ ತೊಂದರೆಯಾಗಲಿದೆ ಎಂದು ಟೀಕೆ ನಡೆಸಿದ್ದರು. ಹೀಗೆ ತಮ್ಮ ವಿರುದ್ಧ ಕಿಡಿಕಾರಿದ ತೇಜಸ್ವಿ ಸೂರ್ಯ ವಿರುದ್ಧ ಡಿಕೆ ಶಿವಕುಮಾರ್ ಕೂಡ ಆಕ್ರೋಶ ಹೊರಹಾಕಿದ್ದರು. ಇದೀಗ ದಿಡೀರ್ ಸಂಸದ ತೇಜಸ್ವಿ ಸೂರ್ಯ ಅವರು ಡಿಕೆಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ಭಾರೀ ಕೂತುಹಲ ಕಾರಣವಾಗಿದೆ.
ಇದನ್ನೂ ಓದಿ : ಟನಲ್ ರೋಡ್ ಬಿಡಿ ಸ್ವಾಮಿ, ಪಾಲಿಕೆ ಶಿಕ್ಷಕರಿಗೆ ಮೊದಲು ಸಂಬಳ ಕೊಡಿ | ಡಿಕೆಶಿ ಕಾಲೆಳೆದ ಆರ್.ಅಶೋಕ್!


















