ಬೆಳಗಾವಿ: ಇಲ್ಲಿಂದ ಮುಂಬೈಗೆ ಶನಿವಾರ ಬೆಳಿಗ್ಗೆ ತೆರಳುತ್ತಿದ್ದ ಸ್ಟಾರ್ ಏರ್ನ ವಿಮಾನ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಅರ್ಧ ದಾರಿಗೆ ವಾಪಾಸ್ಸಾಗಿದೆ.
‘ಸ್ಟಾರ್ ಏರ್ನ ಎಸ್5111 ವಿಮಾನದಲ್ಲಿ 48 ಪ್ರಯಾಣಿಕರಿದ್ದರು. ಬೆಳಿಗ್ಗೆ 7.50ಕ್ಕೆ ಟೇಕಾಫ್ ಆಗಿದ್ದ ವಿಮಾನ 8.50ಕ್ಕೆ ಮುಂಬೈನಲ್ಲಿ ಇಳಿಯಬೇಕಿತ್ತು. ಆದರೆ, ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮುಂಬೈಗೆ ತೆರಳದೆ ಬೆಳಗಾವಿಯಲ್ಲೇ 8.30ಕ್ಕೆ ಲ್ಯಾಂಡ್ ಆಗಿದೆ.
ʼವಿಮಾನದಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ’ ಎಂದು ಸಾಂಬ್ರಾ ವಿಮಾನ ನಿಲ್ದಾಣ ನಿರ್ದೇಶಕ ಎಸ್.ತ್ಯಾಗರಾಜನ್ ತಿಳಿಸಿದ್ದಾರೆ.
‘ಈ ವಿಮಾನ ತುರ್ತು ಭೂಸ್ಪರ್ಶ ಮಾಡಿಲ್ಲ. ಸಹಜವಾಗಿಯೇ ಟರ್ಮಿನಲ್ಗೆ ಬಂದು ಇಳಿದಿದೆ. ಮತ್ತೊಂದು ವಿಮಾನದಲ್ಲಿ ಪ್ರಯಾಣಿಕರನ್ನು ಕಳುಹಿಸಲಾಗಿದೆ’ ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.


















