ಕಾರವಾರ : ಐಸಿಸಿ 2026ರ ಟಿ20 ವಿಶ್ವಕಪ್ ಗೆಲುವಿನ ನಂತರ ಮೊದಲ ಬಾರಿಗೆ ಟೀಂ ಇಂಡಿಯಾ ಸಹಾಯಕ ತರಬೇತುದಾರ ರಾಘವೇಂದ್ರ ದಿವಗಿ ತವರಿಗೆ ಆಗಮಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ರಘು ಕಾರ್ಯನಿರ್ವಹಿಸುತ್ತಿದ್ದು, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದಿವಗಿ ಗ್ರಾಮದವರಾಗಿದ್ದಾರೆ.
ಹೊನ್ನಾವರ ಗೇರುಸೊಪ್ಪದ ವೀರಾಂಜನೆಯ ಮಹಾ ಸಂಸ್ಥಾನಕ್ಕೆ ಆಗಮಿಸಿದ್ದ ರಘು ಆಂಜನೇಯನ ಆಶೀರ್ವಾದ ಪಡೆದುಕೊಂಡರು. ಆ ಬಳಿಕ ಧರ್ಮಾಧಿಕಾರಿಗಳಾದ ಮಾರುತಿ ಗುರೂಜಿ ಆಶೀರ್ವಾದ ಪಡೆದುಕೊಂಡರು. ರಾಘವೇಂದ್ರ ಅವರಿಗೆ ಸಂಸ್ಥಾನದಿಂದ ಸತ್ಕಾರ ಮಾಡಿ ಗೌರವಿಸಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಟೀ ಇಂಡಿಯಾ ಆಟಗಾರನಾದ ಕೆಎಲ್ ರಾಹುಲ್ ಅವರು ಕೂಡ ಗೇರುಸೊಪ್ಪ ವೀರಾಂಜನೇಯ ದರ್ಶನ ಪಡೆದುಕೊಂಡಿದ್ದರು.

ರಾಘವೇಂದ್ರ ಅವರು ಕಳೆದ ಒಂದು ದಶಕದಿಂದ ಟೀಂ ಇಂಡಿಯಾ ಕೋಚಿಂಗ್ ತಂಡದ ಸದಸ್ಯರಾಗಿದ್ದು, ಸ್ಟಾರ್ ಕ್ರಿಕೆಟಿಗರ ಫೆವರೀಟ್ ಥ್ರೋ ಸ್ಪೆಷಲಿಸ್ಟ್ ಆಗಿದ್ದಾರೆ. ವಿಶೇಷ ಎಂದರೇ, ಹಣೆಯಲ್ಲಿ ಕುಂಕುಮದೊಂದಿಗೆ ಸದಾ ಟೀಂ ಇಂಡಿಯಾ ಆಟಗಾರರೊಂದಿಗೆ ಕಾಣಿಸಿಕೊಳ್ಳುವ ರಾಘವೇಂದ್ರ ಅವರು ಕನ್ನಡ ನಾಡಿನ ಅಸಮಾನ್ಯ ಪ್ರತಿಭೆಯಾಗಿದ್ದಾರೆ.
2011ರಲ್ಲಿ ಟೀಂ ಇಂಡಿಯಾ ತಂಡವನ್ನು ಸೇರಿಕೊಂಡ ರಘು ಅವರು ಒಂದು ದಶಕದ ಅವಧಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಎಸೆತಗಳನ್ನು ಎಸೆದಿದ್ದಾರೆ, ಅದು ಅವರ 150 ಕಿಮೀ ವೇಗದಲ್ಲಿ ಥ್ರೋ ಮಾಡುವ ಸಾಮರ್ಥ್ಯವನ್ನ ಹೊಂದಿದ್ದಾರೆ.
ಇದನ್ನೂ ಓದಿ : ಜಲ ವಿದ್ಯುಚ್ಛಕ್ತಿ ನಿಗಮದಲ್ಲಿ 81 ಹುದ್ದೆಗಳ ನೇಮಕಾತಿ.. ಬಿ.ಇ ಮುಗಿಸಿದವರಿಗೆ ಗುಡ್ ನ್ಯೂಸ್!



















