ದುಬೈ: ಭಾರತ ಕ್ರಿಕೆಟ್ ತಂಡದ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಮೊದಲ ಪಂದ್ಯದಲ್ಲಿನೆರೆಯ ಬಾಂಗ್ಲಾ ವಿರುದ್ಧ ಗೆದ್ದರೆ ಇದೀಗ ಪಾಕಿಸ್ತಾನ ವಿರುದ್ಧ ಗೆಲ್ಲುವ ಹಂತದಲ್ಲಿದೆ. ಈ ನಡುವೆ ಭಾರತ ತಂಡ ಪಂದ್ಯ ಆರಂಭಕ್ಕೆ ಮೊದಲು ಒಂದು ಕಳಪೆ ದಾಖಲೆ ಬರೆದಿದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಸೋಲುವ ಮೂಲಕ ಕೆಟ್ಟ ದಾಖಲೆಯೊಂದಕ್ಕೆ ಕಾರಣರಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸತತವಾಗಿ ಅತಿ ಹೆಚ್ಚು ಬಾರಿ ಟಾಸ್ ಸೋತ ತಂಡ ಎಂಬ ಹಣೆಪಟ್ಟಿ ತನ್ನದಾಗಿಸಿಕೊಂಡಿದೆ. ಇದು ಸತತವಾಗಿ 12ನೇ ಬಾರಿ ಭಾರತ ಟಾಸ್ ಸೋತ ನಿದರ್ಶನವಾಗಿದೆ. ಇದನ್ನೂ ಮುನ್ನ ಈ ಕೆಟ್ಟ ದಾಖಲೆ ನೆದರ್ಲೆಂಡ್ಸ್ ಹೆಸರಿನಲ್ಲಿತ್ತು. ನೆದರ್ಲೆಂಡ್ಸ್ 11 ಬಾರಿ ಟಾಸ್ ಸೋತ್ತಿತ್ತು.
ಏಕದಿನದಲ್ಲಿ ಸತತ ಹೆಚ್ಚು ಬಾರಿ ಟಾಸ್ ಸೋತ ತಂಡ
ಭಾರತ-12 ಬಾರಿ(2023-2025)
ನೆದರ್ಲೆಂಡ್ಸ್ -11 ಬಾರಿ(2011-2013)
ಇಂಗ್ಲೆಂಡ್-9 ಬಾರಿ (2023)
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ(IND vs PAK) ತಂಡ ಸ್ಪರ್ಧಾತ್ಮಕ 241 ರನ್ ಬಾರಿಸಿ ಭಾರತಕ್ಕೆ ಸವೋಲೊಡ್ಡಿದೆ. ಪಾಕಿಸ್ತಾನ ಪರ ಮಧ್ಯಮ ಕ್ರಮಾಂಕದ ಬ್ಯಾಟರ್ ಸೌದ್ ಶಕೀಲ್(62) ಬಾರಿಸಿದ ಅರ್ಧಶತಕ ಮತ್ತು ಭಾರತ ಪರ ಕುಲ್‌ದೀಪ್ ಯಾದವ್ 3 ವಿಕೆಟ್ ಉರುಳಿಸಿದ್ದು ಮೊದಲ ಇನಿಂಗ್ಸ್‌ನ ಹೈಲೈಟ್ ಆಗಿತ್ತು.
ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ಮಧ್ಯಮ ಕ್ರಮಾಂಕದಲ್ಲಿ ನಾಯಕ ರಿಜ್ವಾನ್ ಮತ್ತು ಸೌದ್ ಶಕೀಲ್ ಅವರ ಸಣ್ಣ ಬ್ಯಾಟಿಂಗ್ ಹೋರಾಟದ ನೆರವಿನಿಂದ 49.4 ಓವರ್‌ಗಳಲ್ಲಿ 241 ರನ್‌ಗೆ ಸರ್ವಪತನ ಕಂಡಿತು.