ಬೆಂಗಳೂರು: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಿಶ್ವಪ್ರಿಯ ಲೇಔಟ್, ಬೇಗೂರು ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಂದಲೇ ಮಲ, ಮೂತ್ರ ವಿಸರ್ಜನೆ ಮಾಡುವ ಶೌಚಾಲಯದ ಗುಂಡಿ ಕ್ಲೀಸ್ ಮಾಡಿಸಿರುವ ಘಟನೆ ನಡೆದಿದೆ.
ಶಾಲೆಯ ಸುಣ್ಣಬಣ್ಣ ಸ್ವಚ್ಚತೆಗಾಗಿ ಸರ್ಕಾರ ಹಣ ನೀಡುತ್ತದೆ. ಅದನ್ನು ಬಳಕೆ ಮಾಡಬೇಕಿತ್ತು. ಆದರೆ ಸಣ್ಣ ಮಕ್ಕಳ ಕೈಯಲ್ಲಿ ಕ್ಲೀನ್ ಮಾಡಿಸಿದ್ದು ನಿಜಕ್ಕೂ ನೋವಿನ ಸಂಗತಿ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮಕ್ಕಳ ಕೈಯಲ್ಲಿ ಶೌಚಾಲಯದ ಗುಂಡಿ ಕ್ಲೀನ್ ಮಾಡಿಸಿದ ಶಿಕ್ಷಕರಿಗೆ ನಿಜವಾಗಿಯೂ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.