
T20 World Cup 2024ರಲ್ಲಿ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಸೂಪರ್ 8ರ ಎರಡನೇ ಪಂದ್ಯ ಬಾಂಗ್ಲಾದೇಶ ವಿರುದ್ಧ ನಡೆಯಿತು. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಭಾರತೀಯ ಆಟಗಾರರು 13 ವರ್ಷದ ದಾಖಲೆ ಮುರಿದಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ (Team India) 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತ್ತು. ಈ ವೇಳೆ ಭಾರತೀಯ ಆಟಗಾರರು 13 ಸಿಕ್ಸರ್ ಸಿಡಿಸಿದ್ದರು. ರೋಹಿತ್ ಶರ್ಮಾ, ಸೂರ್ಯಕುಮಾರ್ ತಲಾ 1 ಸಿಕ್ಸ್ ಬಾರಿಸಿದರೆ, ರಿಷಭ್ ಪಂತ್ 2 ಸಿಕ್ಸ್, ವಿರಾಟ್ ಕೊಹ್ಲಿ, ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡ್ಯ ತಲಾ 3 ಸಿಕ್ಸ್ ಬಾರಿಸಿದ್ದರು. ಈ ಹದಿಮೂರು ಸಿಕ್ಸರ್ ಗಳೊಂದಿಗೆ ಟೀಮ್ ಇಂಡಿಯಾ ತನ್ನದೇ ಹಳೆಯ ದಾಖಲೆಯನ್ನು ಅಳಿಸಿ ಹಾಕಿದೆ. ಭಾರತ ತಂಡವು ಟಿ20 ವಿಶ್ವಕಪ್ ಪಂದ್ಯವೊಂದರಲ್ಲಿ 11 ಸಿಕ್ಸ್ ಬಾರಿಸಿದ್ದ ಹಿಂದಿನ ದಾಖಲೆಯನ್ನು ಮುರಿದಿದೆ.

2007 ರ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಒಟ್ಟು 11 ಸಿಕ್ಸರ್ ಗಳನ್ನು ಬಾರಿ ಈ ದಾಖಲೆ ನಿರ್ಮಿಸಿದ್ದರು. ಈ ವೇಳೆ ಯುವರಾಜ್ ಸಿಂಗ್ ಒಬ್ಬರೇ 7 ಸಿಕ್ಸ್ ಸಿಡಿಸಿದ್ದರು. ಇದು ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಇದುವರೆಗಿನ ದಾಖಲೆಯಾಗಿತ್ತು. ಈಗ ಬಾಂಗ್ಲಾದೇಶದ ವಿರುದ್ಧದ 13 ಸಿಕ್ಸರ್ ಗಳನ್ನು ಬಾರಿಸುವುದರ ಮೂಲಕ ಆ ದಾಖಲೆಯನ್ನು ಮುರಿದಿದ್ದಾರೆ. ಸೂಪರ್ 8ರ ಕೊನೆಯ ಪಂದ್ಯವನ್ನು ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಈ ಪಂದ್ಯ ಗೆದ್ದರೆ ಭಾರತ ಸೆಮಿಫೈನಲ್ ನಿರಾಯಾಸವಾಗಿ ಸೆಮಿಫೈನಲ್ ತಲುಪಲಿದೆ.
