ಬೆಂಗಳೂರು: ದೇಶದ ಪ್ರತಿಷ್ಠಿತ ಸ್ವಾಮಿ ದಯಾನಂದ ಶಿಕ್ಷಣ ಪ್ರತಿಷ್ಠಾನದಿಂದ 2025-26ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನ ಘೋಷಣೆ ಮಾಡಲಾಗಿದೆ. ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಪದವಿ ಅಧ್ಯಯನ ಮಾಡುತ್ತಿರುವವರು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ವರ್ಷಕ್ಕೆ 50 ಸಾವಿರ ರೂಪಾಯಿ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಬಿ ಟೆಕ್/ಎಂಬಿಬಿಎಸ್/ಬಿ ಆರ್ಚ್ ಕೋರ್ಸ್ಗಳಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30ರವರೆಗೆ ಅವಕಾಶವಿದೆ. ಶೇ.30ರಷ್ಟು ಮಹಿಳಾ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಮೀಸಲಿದೆ. ಅಭ್ಯರ್ಥಿಗಳು scholarships@swamidayanand.org ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹತೆಗಳು ಏನೇನು?
ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿದಾರರು ತಮ್ಮ 12 ನೇ ತರಗತಿ ಪರೀಕ್ಷೆಗಳಲ್ಲಿ ಕನಿಷ್ಠ 80% ಅಂಕಗಳನ್ನು ಪಡೆದಿರಬೇಕು.
ಕುಟುಂಬದ ವಾರ್ಷಿಕ ಆದಾಯ ₹12 ಲಕ್ಷಕ್ಕಿಂತ ಕಡಿಮೆ ಇರಬೇಕು.
ಅಭ್ಯರ್ಥಿಗಳು ಅದೇ ವರ್ಷದಲ್ಲಿ JEE ಅಥವಾ NEET ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು (ಒಂದು ವರ್ಷ ಡ್ರಾಪ್ ತೆಗೆದುಕೊಂಡ ವಿದ್ಯಾರ್ಥಿಗಳು ಅರ್ಹರಲ್ಲ.)
ಕೃಷಿ ಹಿನ್ನೆಲೆಯ ವಿದ್ಯಾರ್ಥಿಗಳು ಸಂಪೂರ್ಣ ವಿವರಗಳನ್ನು ಪೂರಕ ದಾಖಲೆಗಳೊಂದಿಗೆ ಸಲ್ಲಿಸಬೇಕು.
ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ವಿದ್ಯಾರ್ಥಿವೇತನದ 30% ಮಹಿಳಾ ಅರ್ಜಿದಾರರಿಗೆ ಮೀಸಲಾಗಿದೆ.
ಸಲ್ಲಿಸಬೇಕಾದ ದಾಖಲೆಗಳು
ಇತ್ತೀಚಿನ ಫೋಟೊ
ಪ್ರವೇಶ ಪತ್ರ ಅಥವಾ ಕಾಲೇಜು ಗುರುತಿನ ಚೀಟಿ
10ನೇ ಮತ್ತು 12ನೇ ತರಗತಿಯ ಅಂಕಪಟ್ಟಿಗಳು/ಪ್ರಮಾಣಪತ್ರಗಳು.
ಜೆಇಇ/ನೀಟ್ ಫಲಿತಾಂಶ ಪತ್ರ
ಶುಲ್ಕ ರಶೀದಿಗಳ ಪ್ರತಿ.
ಕುಟುಂಬದ ಆದಾಯ ಪುರಾವೆ- ಸಂಬಳ ಪ್ರಮಾಣಪತ್ರ/ ಐಟಿ ರಿಟರ್ನ್ ಫಾರ್ಮ್/ ಪಿಂಚಣಿ ಪ್ರತಿ
ವಿದ್ಯುತ್ ಬಿಲ್/ ನೀರಿನ ಬಿಲ್ನ ಪ್ರತಿ
ಪೋಷಕರು ರೈತರಾಗಿದ್ದರೆ, ಕೃಷಿ ಭೂಮಿಯ ದಾಖಲೆಗಳನ್ನು ಲಗತ್ತಿಸಬೇಕು.



















