ಬೆಂಗಳೂರು: ಆರ್ ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಸಸ್ಪೆಂಡ್ ಆಗಿದ್ದ ಹಿರಿಯ ಐಪಿಎಸ್ ಅಧಿಕಾರಿಗಳ ಅಮಾನತು ಆದೇಶವನ್ನ ಸರ್ಕಾರ ವಾಪಸ್ ಪಡೆದಿದೆ. ಈ ಬಗ್ಗೆ ಇಂದು ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಸಂಪುಟ ಸಭೆಯ ತೀರ್ಮಾನದಂತೆ ಅಮಾನತು ವಾಪಸ್ ಪಡೆದಿದ್ದೇವೆ. ಆದ್ರೆ ವಿಚಾರಣೆ ಮುಂದುವರೆಯಲಿದೆ. ಸಿಎಟಿಗೆ ಹೋದ ಅಧಿಕಾರಿ ವಿಕಾಸ್ ಕುಮಾರ್ ಸಸ್ಪೆಂಡ್ ವಾಪಸ್ ಪಡೆದಿಲ್ಲ. ಆದ್ರೆ ಅಮಾನತು ವಾಪಸ್ ಸರ್ಕಾರಕ್ಕೆ ಹಿನ್ನಡೆ ಅಲ್ಲ. ಇದು ಆಡಳಿತಾತ್ಮಕ ನಿರ್ಧಾರ ಅಷ್ಟೇ, ತನಿಖೆ ಮುಂದುವರೆಯುತ್ತೆ.
ದಯಾನಂದ್ ಅವರಿಗೆ ಮತ್ತೆ ಆಯುಕ್ತ ಹುದ್ದೆ ಕೊಡಲ್ಲ. ಅದಕ್ಕೆ ಸಮಾನಾಂತರ ಹುದ್ದೆ ಕೊಡ್ತೇವೆ ಅಂತಾ ಹೋಮ್ ಮಿನಿಸ್ಟರ್ ಡಾಕ್ಟರ್ ಜಿ. ಪರಮೇಶ್ವರ್ ಹೇಳಿದ್ದಾರೆ. ಇನ್ನು ಜೂನ್ 3 ರಂದು ಆರ್ ಸಿಬಿ ಟೀಂ ಕಪ್ ಗೆದ್ದಿತ್ತು. ಜೂನ್ 4 ರಂದು ಆರ್ ಸಿಬಿ ವಿಜಯೋತ್ಸವ ನಡೆದು ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿ ದುರಂತದಲ್ಲಿ 11 ಜನ ಅಭಿಮಾನಿಗಳು ಕೊನೆಯುಸಿರೆಳೆದಿದ್ದರು.