ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರ ಗೌಡ ಸೇರಿ ಏಳು ಆರೋಪಿಗಳ ಜಾಮೀನು ರದ್ದಾಗಿದೆ. ಸುಪ್ರೀಂ ಕೋರ್ಟ್ ಇಂದು (ಗುರುವಾರ, ಆ.14) ಜಾಮೀನು ರದ್ದು ಮಾಡಿ ಆದೇಶ ಪ್ರಕಟಿಸಿದೆ.
ಈ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ, ರಾಜ್ಯ ಸರ್ಕಾರದ ತನಿಖಾ ಸಂಸ್ಥೆಗೆ ಪೂರಕವಾದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ತನಿಖೆಗೆ ದರ್ಶನ್ ಹೊರಗಡೆ ಇದ್ದಿದ್ದು ಅಡ್ಡಿಯಾಗುತ್ತಿತ್ತು ಎಂಬ ಅಭಿಪ್ರಾಯ ಸುಪ್ರೀಂ ಕೋರ್ಟ್ ಗೆ ಇತ್ತು. ಅವರು ಬಂಧನದಲ್ಲಿ ಇಲ್ಲದೇ ಇದ್ದಾಗ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇತ್ತು. ಈ ತೀರ್ಪನ್ನು ನಾವು ಸ್ವಾಗತಿಸ್ತೇವೆ ಎಂದು ಹೇಳಿದ್ದಾರೆ.
ಸರ್ವೋಚ್ಚ ನ್ಯಾಯಾಲಯ ಏನು ಆದೇಶ ನೀಡಿದೆಯೋ ಅದನ್ನು ಪಾಲಿಸಬೇಕು. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗೆ ಐಷರಾಮಿ ವ್ಯವಸ್ಥೆ ದೊರಕಿತ್ತು ಎಂದು ತಿಳಿದುಬಂದಾಗ, ಆತನನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಿದ್ದೇವು. ಮೆಡಿಕಲ್ ಬೇಲ್ ವಿಚಾರಕ್ಕೆ ನ್ಯಾಯಾಲಯ ಬೇರೆ ರೀತಿ ತೆಗೆದುಕೊಳ್ಳುತ್ತದೆ. ದರ್ಶನ್ ಗೆ ವಿಶೇಷ ಶಸ್ತ್ರಚಿಕಿತ್ಸೆಗೆ ಎಂದು ಹೈಕೋರ್ಟ್ ಜಾಮೀನು ನೀಡಿತ್ತು. ಆದರೇ, ಹೈಕೋರ್ಟ್ ನೀಡಿರುವ ತೀರ್ಪನ್ನು ದರ್ಶನ್ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.