ನವದೆಹಲಿ : ದೀಪಾವಳಿ ಹತ್ತಿರ ಬರ್ತಿದ್ದಂತೆ ಈ ಬಾರಿ ಪಟಾಕಿ ಇಲ್ವಲ್ಲ ಅಂತಾ ಬೇಸರದಿಂದ ಇದ್ದ ರಾಷ್ಟ್ರ ರಾಜಧಾನಿ ದೆಹಲಿಯ ಪಟಾಕಿ ಪ್ರಿಯರಿಗೆ ಸುಪ್ರೀಂ ಕೋರ್ಟ್ ಗುಡ್‌ನ್ಯೂಸ್ ನೀಡಿದೆ.
ದೀಪಾವಳಿಗೆ ದೆಹಲಿ-ಎನ್‌ಸಿಆರ್‌ನಲ್ಲಿ ಪಟಾಕಿ ನಿಷೇಧವನ್ನು ಬುಧವಾರ (ಅಕ್ಟೋಬರ್ 15) ಸುಪ್ರೀಂ ಕೋರ್ಟ್ ಸಡಿಲಗೊಳಿಸಿದೆ. ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಅಕ್ಟೋಬರ್ 18ರಿಂದ ಅಕ್ಟೋಬರ್ 21ರವರೆಗೆ, ಅಂದರೆ ದೀಪಾವಳಿಯ ದಿನದಂದು ಹಸಿರು ಪಟಾಕಿಗಳನ್ನು ಬಳಸಲು ಅನುಮತಿ ನೀಡಿದೆ.
ನ್ಯಾಯಾಲಯವು ಹಸಿರು ಪಟಾಕಿಗಳನ್ನು ಬಳಸಲು ಸಮಯ ನಿರ್ಬಂಧಗಳನ್ನು ನಿಗದಿಪಡಿಸಿದ್ದು, ಬೆಳಿಗ್ಗೆ 6ರಿಂದ ಬೆಳಿಗ್ಗೆ 7ವರೆಗೆ ಮತ್ತು ರಾತ್ರಿ 8 ರಿಂದ ರಾತ್ರಿ 10ರವರೆಗೆ ಅನುಮೋದಿತ ಪ್ರದೇಶಗಳಲ್ಲಿ ಮಾತ್ರ ಪಟಾಕಿಗಳನ್ನು ಸಿಡಿಸಬಹುದು ಎಂದು ಷರತ್ತು ವಿಧಿಸಿದೆ.
ಹಾಗೆಯೇ QR ಕೋಡ್‌ಗಳನ್ನು ಹೊಂದಿರುವ ಅನುಮೋದಿತ ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಗಸ್ತು ತಂಡಗಳನ್ನು ರಚಿಸುವಂತೆ ನ್ಯಾಯಾಲಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.