ನಾಸಾದ ಇಬ್ಬರು ಖಗೋಳವಿಜ್ಞಾನಿಗಳಾಗಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ನಿಂದ ಮಂಗಳವಾರ ಸ್ಪೇಸ್‌ಎಕ್ಸ್ ಡ್ರಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಭೂಮಿಗೆ ಹಾರಾಟ ಆರಂಭಿಸಿದ್ದಾರೆ. ಸ್ಪೇಸ್‌ಎಕ್ಸ್‌ನ ಡ್ರಾಗನ್ ಕ್ಯಾಪ್ಸೂಲ್ ಬೆಳಗ್ಗೆ 10 ಗಂಟೆಗೆ ಬಾಹ್ಯಾಕಾಶ ನಿಲ್ದಾಣದಿಂದ ಹೊರಟಿದ್ದು, ಹವಾಮಾನ ಪರಿಸ್ಥಿತಿಗೆ ಪೂರಕವಾಗಿ ಭಾರತೀಯ ಕಾಲಮಾನದ ಪ್ರಕಾರ ಬುಧವಾರ ಮುಂಜಾನೆ 3 ಗಂಟೆಯ ವೇಳೆಗೆ ಭೂಮಿಗೆ ಬಂದು ಸೇರಲಿದೆ.
ನಾಸಾದ ಪ್ರಕಾರ, ಖಗೋಳವಿಜ್ಞಾನಿಗಳು ಮಂಗಳವಾರ ರಾತ್ರಿ 11:05 (ಅಮೆರಿಕದ ಸಮಯ) ಗಂಟೆಗೆ ಸ್ಪೇಸ್‌ಎಕ್ಸ್ ಕ್ರ್ಯೂ ಡ್ರಾಗನ್ ವಾಹನದಲ್ಲಿ ಪಯಣ ಶುರುಮಾಡಿದರು. ಮೊದಲ 40 ನಿಮಿಷಗಳಲ್ಲಿ, ಅವರು ತಮ್ಮ ಫ್ಲೈಟ್ ಸೂಟ್ಗಳನ್ನು ಧರಿಸಿ, ಸೀಟುಗಳಲ್ಲಿ ಕುಳಿತು ಎಲ್ಲ ರೀತಿಯ ಪರಿಶೀಲನೆಗಳನ್ನು ನಡೆಸಿದರು. ಎರಡು ಗಂಟೆಯಲ್ಲಿ ಎಲ್ಲ ತಪಾಸಣೆಗಳು ಪೂರ್ಣಗೊಂಡು ಕ್ಯಾಪ್ಸೂಲ್ ಬಾಹ್ಯಾಕಾಶ ನಿಲ್ದಾಣದಿಂದ ಹೊರಟಿತು. ನಾಸಾ ಈ ಎಲ್ಲ ಪ್ರಕ್ರಿಯೆಗಳ ನೇರ ಪ್ರಸಾರ ಮಾಡಿದೆ.
ಡ್ರಾಗನ್ ಕ್ಯಾಪ್ಸೂಲ್ ಫ್ಲೋರಿಡಾದ ಅಮೆರಿಕದ ಸಮಯ ಸಂಜೆ 5;57ಕ್ಕೆ ಗಲ್ಫ್ ಕರಾವಳಿಯ ಬಳಿ ನೀರಿನಲ್ಲಿ ಇಳಿಯಲಿದೆ. ನಾಸಾದ ತಂಡಳು ವಾಹನವನ್ನು ಸ್ವೀಕರಿಸಿ , ಖಗೋಳವಿಜ್ಞಾನಿಗಳನ್ನು ಹಡಗಿನ ಮೇಲಕ್ಕೇರಿಸುತ್ತಾರೆ. ಬಳಿಕ ಅವರನ್ನು ಹೂಸ್ಟನ್‌ಗೆ ಕರೆದೊಯ್ಯಲಾಗುತ್ತದೆ. ಅದು ಜಾನ್ಸನ್ ಬಾಹ್ಯಾಕಾಶ ಕೇಂದ್ರದ ನೆಲೆ. ಅಲ್ಲಿ ಬಾಹ್ಯಾಕಾಶ ಯಾನಿಗಳ ಪುನಶ್ಚೇತನ ಆರಂಭವಾಗಲಿದೆ.
17 ಗಂಟೆ ಯಾಕೆ?
ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿ ಪ್ರಕಾರ “ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹಿಂದಿರುಗುವ ವೇಳೆ ಖಗೋಳವಿಜ್ಞಾನಿಗಳು 28,800 ಕಿಮೀ ವೇಗದಲ್ಲಿ ಸಾಗುತ್ತದೆ.
ಕಳೆದ ವರ್ಷ ರಷ್ಯದ ಸೊಯುಜ್ ಕ್ಯಾಪ್ಸೂಲ್ ಅಂತಾರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಮೂವರು ಸಿಬ್ಬಂದಿಯನ್ನು ಭೂಮಿಗೆ ಕರೆತರಲು ಕೇವಲ 3.5 ಗಂಟೆಗಳನ್ನು ತೆಗೆದುಕೊಂಡಿತ್ತು. ಹಾಗಾದರೆ, ಸ್ಪೇಸ್‌ಎಕ್ಸ್ ಡ್ರಾಗನ್ ಕ್ಯಾಪ್ಸೂಲ್ ಇಬ್ಬರು ಖಗೋಳವಿಜ್ಞಾನಿಗಳನ್ನು ಭೂಮಿಗೆ ಹಿಂದಿರುಗಿಸಲು 17 ಗಂಟೆಗಳನ್ನು ಏಕೆ ತೆಗೆದುಕೊಳ್ಳುತ್ತಿದೆ ಎಂಬ ಪ್ರಶ್ನೆಯೊಂದು ಎದುರಾಗಿದೆ. ಅದಕ್ಕೆ ಇಲ್ಲಿದೆ ಉತ್ತರ.
ಸ್ಪೇಸ್‌ಎಕ್ಸ್‌ನ ಕ್ರೂ ಡ್ರಾಗನ್ ಕ್ಯಾಪ್ಸೂಲ್, ಯೋಜಿತ ಡೀಆರ್ಬಿಟ್, ಡಿಸೆಂಟ್ ಮತ್ತು ಸ್ಲ್ಪಾಶ್ಡೌನ್ ಸೀಕ್ವೆನ್ಸ್ ಅನ್ನು ಹೊಂದಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಭೂಮಿಯ ಸುತ್ತ ಸುಮಾರು 28,000 ಕಿಮೀ/ಗಂಟೆ (17,500 ಮೈಲಿ/ಗಂಟೆ) ವೇಗದಲ್ಲಿ ಸುಮಾರು 420 ಕಿ.ಮೀ ಎತ್ತರದಲ್ಲಿ ಸುತ್ತುತ್ತದೆ. ಈ ಕಕ್ಷೆಯಿಂದ ಡ್ರ್ಯಾಗನ್ ಕ್ಯಾಪ್ಸೂಲ್ ನಿಧಾನವಾಗಿ ಹೊರ ಬರುತ್ತದೆ. ಲ್ಯಾಂಡಿಂಗ್ ಜೋನ್‌ಗಳು ಮತ್ತು ಭೂಮಿಯ ಸುತ್ತುವಿಕೆಗೆ ಸರಿಹೊಂದಿಸಬೇಕಾಗುತ್ತದೆ. ಈ ನೌಕೆಯು ಡೀಆರ್ಬಿಟ್ ಬರ್ನ್ ಅನ್ನು ಕೂಡಾ ಮಾಡಬೇಕಾಗುತ್ತದೆ. ಸ್ಲ್ಪಾಶ್ಡೌನ್ಗೆ ಪಥವನ್ನು ಹೊಂದಿಸಬೇಕಾಗುತ್ತದೆ.
ಭೂಮಿಯ ವಾತಾವರಣದ ಪರಿಸ್ಥಿತಿಗೆ ಪೂರಕವಾಗಿ ಸುರಕ್ಷಿತ ಪ್ರದೇಶವನ್ನು ನಿಗದಿ ಮಾಡಿ ಅದಕ್ಕೆ ಪೂರಕ ಕೋನವನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಇನ್ನು ಕ್ಯಾಪ್ಸೂಲ್ ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ, ಗಾಳಿಯ ಪ್ರತಿರೋಧದಿಂದಾಗಿ ಗರಿಷ್ಠ ಶಾಖ ಉಂಟು ಮಾಡುತ್ತದೆ. ಹೀಗಾಗಿ ನಿಯಂತ್ರಿತ ವೇಗದಲ್ಲಿ ಇಳಿಸಬೇಕಾಗುತ್ತದೆ. ಹೀಗಾಗಿ ಗರಿಷ್ಠ ಎತ್ತರದಲ್ಲಿ ಪ್ಯಾರಾಚೂಟ್‌ಗನ್ನು ನಿಯೋಜಿಸಬೇಕು ಹಾಗೂ ಸ್ಪ್ಲಾಶ್ಡೌನ್ ಸಮಯದಲ್ಲಿ ವೇಗವನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸಬೇಕಾಗುತ್ತದೆ.
ಹವಾಮಾನ ಪರಿಸ್ಥಿತಿಗಳು, ಸಮುದ್ರದ ಅಬ್ಬರ ಮತ್ತು ರಿಕವರಿ ಹಡಗುಗಳು ಇರುವ ಸ್ಥಳಗಳ ಆಧಾರದ ಮೇಲೆ ಲ್ಯಾಂಡಿಂಗ್ ಸೈಟ್ ಅನ್ನು ಸ್ಪೇಸ್‌ಎಕ್ಸ್ ಎಚ್ಚರಿಕೆಯಿಂದ ಆಯ್ಕೆ ಮಾಡುತ್ತದೆ. ಒಂದು ವೇಳೆ ಪರಿಸ್ಥಿತಿ ಪೂರಕವಾಗಿ ಇಲ್ಲ ಎಂದಾರೆ ಕ್ಯಾಪ್ಸೂಲ್ ಡೀಆರ್ಬಿಟ್ ಮಾಡದೇ ಕಕ್ಷೆಯಲ್ಲಿಯೇ ಉಳಿಯುವಂತೆ ಮಾಡಲಾಗುತ್ತದೆ.
ಸೊಯುಜ್ ಯಾಕೆ ವೇಗ?
ರಷ್ಯನ್ ಸೊಯುಜ್ ಕ್ಯಾಪ್ಸೂಲ್ ಸುಮಾರು 3.5 ಗಂಟೆಗಳಲ್ಲಿ ಹಿಂತಿರುವುದಕ್ಕೆ ಕಾರಣವಿದೆ. ಅದು ಹೆಚ್ಚು ನೇರ, ಬ್ಯಾಲಿಸ್ಟಿಕ್ ಡಿಸೆಂಟ್ ಪ್ರೊಫೈಲ್ ಪಾಲಿಸುತ್ತದೆ. ಅದು ನೇರವಾಗಿ ಬಂದು ಸ್ಪ್ಯಾಶ್ಡೌನ್ ಆಗುತ್ತದೆ. ಕಕ್ಷೆಯಲ್ಲಿ ಸುತ್ತುವ ಅಥವಾ ನಿಧಾನಗತಿಯಲ್ಲಿ ಭೂಮಿಗೆ ಸುತ್ತುವ ಪ್ರಕ್ರಿಯೆಗಳು ಇಲ್ಲಿಲ್ಲ. ಇಲ್ಲಿ ಡಿಆರ್ಬಿಟ್ ಪ್ರಕ್ರಿಯೆಗಳು ಸುಲಭವಾಗಿರುತ್ತದೆ. ಕೊನೇ ಹಂತದಲ್ಲಿ ನಿಧಾನಗೊಂಡು ಸಮುದ್ರದಲ್ಲಿ ಇಳಿಯುತ್ತದೆ.