ಮುಂಬೈ: ಮುಂಬೈನ ಬೋರಿವಲಿ ರೈಲು ನಿಲ್ದಾಣದ ಸ್ಕೈವಾಕ್‌ನಲ್ಲಿ ವ್ಯಕ್ತಿಯೊಬ್ಬ ನಾಯಿಯೊಂದರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಯುವಕ ಬೀದಿನಾಯಿಯನ್ನುಲೈಂಗಿಕ ದೌರ್ಜನ್ಯ ಮಾಡುತ್ತಿರುವ ವಿಡಿಯೊ ಜಾಗೃತ ವ್ಯಕ್ತಿಯೊಬ್ಬರು ಮಾಡಿದ ವಿಡಿಯೊದಲ್ಲಿ ದಾಖಲಾಗಿದೆ.
ವೀಡಿಯೋದಲ್ಲಿ ಮುಗ್ಧ ಪ್ರಾಣಿಯ ಮೇಲೆ ನಡೆಯುತ್ತಿರುವ ಕ್ರೂರ ಕೃತ್ಯವನ್ನು ಸ್ಪಷ್ಟವಾಗಿ ನೋಡಬಹುದು.
ವರದಿಗಳ ಪ್ರಕಾರ, ಈ ಘಟನೆ ಜನವರಿ 29ರಂದು (ಬುಧವಾರ) ಮುಂಬೈಯ ಬೋರಿವಲಿ ನಿಲ್ದಾಣದ ಫ್ಲೈಓವರ್‌ನಲ್ಲಿ ನಡೆದಿದೆ. ವೀಡಿಯೋದಲ್ಲಿ ಒಬ್ಬ ವ್ಯಕ್ತಿ ನಾಯಿಯ ಮೇಲೆ ಲೈಂಗಿನ ದೌರ್ಜನ್ಯ ನಡೆಸುವುದನ್ನು ಕಾಣಬಹುದು. ವಿಡಿಯ ಮಾಡಿದ ವ್ಯಕ್ತಿ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ದುಷ್ಕರ್ಮಿಯನ್ನು ಪ್ರಶ್ಸಿಸಿದ್ದಾನೆ. ವೀಡಿಯೋದಲ್ಲಿ ಅವರು ಕ್ಯಾ ಕರ ರಹಾ ಹೈ? (ನೀನು ಏನು ಮಾಡುತ್ತಿದ್ದೀಯ?) ಎಂದು ಹೇಳುವುದನ್ನು ಕೇಳಿಸಿಕೊಳ್ಳಬಹುದು.
ದುಷ್ಕರ್ಮಿ ತಕ್ಷಣವೇ ಎದ್ದು ನಿಂತು ಓಡಲು ಪ್ರಾರಂಭಿಸುತ್ತಾನೆ. ವೀಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿ, ಆತನನ್ನು ಕೆಲವು ದೂರವರೆಗೆ ಹಿಂಬಾಲಿಸುತ್ತಾರೆ. ಕೊನೆಗೆ, ಆರೋಪಿ ಕ್ಯಾಮೆರಾದಿಂದ ಕಣ್ಮರೆಯಾಗುತ್ತಾನೆ.
ವೀಡಿಯೋ ಪ್ರಾಣಿ ಹಕ್ಕುಗಳ ಪರ ಹೋರಾಟ ನಡೆಸುವ “StreetdogsofBombay” ಎಂಬ ಇನ್‌ಸ್ಟಾಗ್ರಾಮ್ ಖಾತೆ ಹಂಚಿಕೊಂಡಿದೆ.ಅಲ್ಲದೆ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದೆ.
ʼʼಜನವರಿ 29, 2025ರಂದು, ಮಧ್ಯರಾತ್ರಿ 3 ಗಂಟೆಯ ವೇಳೆ ಮುಂಬೈನ ಬೋರಿವಲಿ ನಿಲ್ದಾಣದ ಫ್ಲೈಓವರ್ ಬಳಿ ಒಂದು ಭಯಾನಕ ಪ್ರಾಣಿ ಹಿಂಸೆ ನಡೆದಿದೆ. ನಾಯಿಯೊಂದು ದೌರ್ಜನ್ಯಕ್ಕೆ ಗುರಿಯಾಯಿತು. ಇಂತಹ ಕ್ರೂರತೆಗೆ ನಮ್ಮ ಸಮಾಜದಲ್ಲಿ ಜಾಗವಿಲ್ಲ. ತಪ್ಪಿತಸ್ಥನಿಗೆ ಕಠಿಣ ಶಿಕ್ಷೆಯಾಗಬೇಕು,ʼʼ ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.
“ನಮಗೆ ನಿಮ್ಮ ಸಹಾಯ ಬೇಕು! ಈ ಘಟನೆ ಬಗ್ಗೆ ನಿಮಗೆ ಯಾವುದೇ ಮಾಹಿತಿ ಇದ್ದರೆ ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ. ಒಟ್ಟಾಗಿ ಪ್ರಾಣಿ ಹಿಂಸೆಗೆ ತಡೆ ಹಾಕೋಣ ಮತ್ತು ಎಲ್ಲ ಜೀವಿಗಳಿಗೆ ಸುರಕ್ಷಿತ ಜಗತ್ತನ್ನು ನಿರ್ಮಿಸೋಣ. ದಯವಿಟ್ಟು ನಿಮ್ಮ ಧ್ವನಿಯನ್ನು ಬೆಂಬಲಿಸಿ. ಈ ಕ್ರೂರತೆಯ ವಿರುದ್ಧ ನಿಲ್ಲಿ ಮತ್ತು ನ್ಯಾಯ ಒದಗಿಸಲು ಸಹಾಯ ಮಾಡಿʼʼ ಎಂದು ಬರೆಯಲಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಹಲವಾರು ಪ್ರಾಣಿ ಹಕ್ಕು ಹೋರಾಟಗಾರರು ಮತ್ತು ಪ್ರಾಣಿಪ್ರೇಮಿಗಳು ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ʼʼಇಂತಹ ಅಮಾನುಷ ಕೃತ್ಯಗಳನ್ನು ತಡೆಯಲು, ಜನರು ತಮ್ಮ ಧ್ವನಿಯನ್ನು ಹೆಚ್ಚಿಸಬೇಕು, ಹೋರಾಟ ಮಾಡಬೇಕು!ಎಂದು ಹೇಳಿದ್ದಾರೆ.