ಕೋಲಾರ: ವಸತಿ ಶಾಲೆಯ ವಾರ್ಡನ್ ವಿದ್ಯಾರ್ಥಿಯೋರ್ವನಿಗೆ ಬೆಲ್ಟ್ ನಲ್ಲಿ ಥಳಿಸಿ ಮೃಗೀಯ ವರ್ತನೆ ತೋರಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬಾಳಸಂದ್ರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ವಸತಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿ ಅಂಜನ್ ಕುಮಾರ್ ಎಂಬಾತ ವಸತಿ ನಿಲಯದಲ್ಲಿ ದೆವ್ವ ಇದೆಯೆಂದು ಸಹ ವಿದ್ಯಾರ್ಥಿಗಳಿಗೆ ಹೇಳಿ ಹೆದರಿಸುತ್ತಿದ್ದ. ಇದೇ ಕಾರಣಕ್ಕೆ ಕೋಪಗೊಂಡ ವಾರ್ಡನ್ ಮಹೇಶ್ ಏಕಾಏಕಿ ಬೆಲ್ಟ್ ನಿಂದ ವಿದ್ಯಾರ್ಥಿಯನ್ನು ಮನಸೋಇಚ್ಚೆ ಥಳಿಸಿ ಬೆನ್ನು, ಕೈ, ತೊಡೆ ಭಾಗಕ್ಕೆ ಬೆಲ್ಟ್ ನಿಂದ ಹಲ್ಲೆ ಮಾಡಿ, ಕಾಲಿನಿಂದ ಒದ್ದಿದ್ದಾನೆ.
ವಾರ್ಡ್‌ನ್ ನ ಈ ವರ್ತನೆಯನ್ನು ತೀವ್ರವಾಗಿ ಖಂಡಿಸಿದ ಪೋಷಕರು ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.