ಬೆಳಗಾವಿ: ವಿದ್ಯಾರ್ಥಿನಿಯೊಬ್ಬರು ಪಿಜಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಇಲ್ಲಿಯ ನೆಹರು ನಗರದ ಪಿಜಿಯಲ್ಲಿ ಈ ಘಟನೆ ನಡೆದಿದೆ. ವಿಜಯಪುರ(Vijayapura) ಎಂಬಿಎ ವ್ಯಾಸಂಗ ಮಾಡಿದ್ದ ಐಶ್ವರ್ಯ ಎಂಬುವವರು ಕೆಲಸಕ್ಕೆಂದು ನಗರಕ್ಕೆ ಬಂದಿದ್ದರು ಎನ್ನಲಾಗಿದೆ.
ನಗರದಲ್ಲಿನ ಕಂಪನಿಯೊಂದರಲ್ಲಿ ಐಶ್ವರ್ಯಾ ಟ್ರೇನಿ ಆಗಿ ತರಬೇತಿ ಪಡೆಯುತ್ತಿದ್ದರು. ಕಳೆದ ಮೂರು ತಿಂಗಳುಗಳಿಂದ ಪಿಜಿಯಲ್ಲಿದ್ದರು. ಮಂಗಳವಾರ ಎಂದಿನಂತೆ ತಮ್ಮ ಸ್ನೇಹಿತೆಯೊಂದಿಗೆ ಪಿಜಿಗೆ ತೆರಳಿದ್ದಾರೆ. ಲವ್ ಬ್ರೇಕ್ ಬ್ರೇಕ್ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸ್ನೇಹಿತನೊಬ್ಬ ಪಿಜಿಗೆ ಬಂದು ಹೋಗಿರುವ ದೃಶ್ಯ ಕೂಡ ಸೆರೆಯಾಗಿದೆ ಎನ್ನಲಾಗಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.