ಬೆಂಗಳೂರು : ಗಣೇಶೋತ್ಸವ ಕಾರ್ಯಕ್ರಮ, ಮೆರವಣಿಗೆ, ಹಿಂದೂ ಧರ್ಮವನ್ನ ಪರಸ್ಪರ ಗೌರವಿಸಬೇಕು. ಇತರೆ ಧರ್ಮದ ಕಾರ್ಯಕ್ರಮ ಗೌರವಿಸಬೇಕು. ಶತಶತಮಾನಗಳಿಂದ ಇದು ಹಿಂದೂಗಳ ಭೂಮಿ. ನಾವು ಪಾಕಿಸ್ತಾನದಲ್ಲಿ ಇಲ್ಲ. ಭಾರತದ ನೆಲದಲ್ಲಿ ಇದ್ದು, ಪ್ರತಿ ಭಾರಿ ಅನ್ಯ ಕೋಮಿನವರ ಈ ರೀತಿಯ ವರ್ತನೆ ಸರಿಯಲ್ಲ. ನಾವು ಇದನ್ನು ಸಹಿಸುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಮದ್ದೂರು ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿಗಾರರಿಗೆ ಸ್ಪಂದಿಸಿ ಮಾತನಾಡಿದ ಅಶ್ವಥ್, ಬೆಂಗಳೂರಿನಲ್ಲಿ ಈದ್ ಮಿಲಾದ್ ಕಾರ್ಯಕ್ರಮ ಮಾಡಲಾಯಿತು. ಅವರ ಕಾರ್ಯಕ್ರಮದ ಮೇಲೆ ಹಿಂದೂಗಳು ಕಲ್ಲು ತೂರಿದ್ದಾರಾ ? ಇವರ ಅಟ್ಟಹಾಸ, ಅನ್ಯ ಧರ್ಮದ ಮೇಲೆ ಕಲ್ಲು ತೂರಾಟ ಮಾಡಿ ಮೆರೆಯುವುದು ಅಷ್ಟೆ. ಗಣೇಶ ವಿಗ್ರಹದ ಮೇಲೆ ಕಲ್ಲು ತೂರಾಟ, ಲಾಂಗು, ಮಚ್ಚು ತೋರಿಸೋದು ಅತಿರೇಕದ ವರ್ತನೆ ಎಂದು ಅವರು ಖಂಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣಕ್ಕೆ ನಾವು ಮಣಿಯಲ್ಲ. ಕೇವಲ ಪೊಸ್ಟಿಂಗ್ ಗಾಗಿ ಕಾಂಗ್ರೆಸ್ ಸರ್ಕಾರದ ಮಾತು ಕೇಳಿಕೊಂಡಿದ್ದರೆ ಆಗಲ್ಲ. ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಮಸೀದಿ ಮುಂದೆ ಕಲ್ಲು ಹೊಡೆಯುತ್ತಾರೆ ಅಂದರೆ, ಮೊದಲೇ ಕ್ರಮ ಕೈಗೊಳ್ಳಬೇಕಿತ್ತು. ಪ್ರತಿಭಟನೆ ಮಾಡುವವರ ಮೇಲೆ ಪೌರುಷ ತೋರುತ್ತೀರಿ. ಪೌರುಷ ಇದ್ದಿದ್ದರೆ, ನಿನ್ನೆ ಕಲ್ಲು ತೂರುವುದನ್ನು ತಡೆಯಬೇಕಿತ್ತು. ಅಜಾನ್ ಕೂಗುವುದನ್ನು ತಡೆಯಬೇಕಿತ್ತು ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಆಜಾನ್ ಕೂಗುವುದಕ್ಕೆ ಅವಕಾಶ ನೀಡಿದೆಯಾ.? ಪೊಲೀಸ್ ವ್ಯವಸ್ಥೆ ಹಾಳಾದರೆ, ಯಾರ ಬಳಿ ಹೋಗಿ ನ್ಯಾಯ ಕೇಳಬೇಕು. ಘಟನೆಯನ್ನ ಖಂಡಿಸ್ತೇನೆ. ಅನ್ಯ ಧರ್ಮದ ವ್ಯಕ್ತಿಗಳು ಹಿಂದೂಗಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಇದು ಭಾರತ ಭೂಮಿ, ಹಿಂದೂಗಳ ಧಾರ್ಮಿಕ ಕಾರ್ಯಕ್ರಮ ಒಪ್ಪಬೇಕು ಎಂದು ಹೇಳಿದ್ದಾರೆ.
ಕಲ್ಲು ತೂರಾಟ ಮಾಡಿದವರು ನೆರೆ ಜಿಲ್ಲೆಗಲಿಂದ ಬಂದವರು ಎನ್ನುವ ಮಾಹಿತಿ ಇದೆ. ಆತ್ಮ ಸಾಕ್ಷಿ ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರ ಕೆಲಸ ಮಾಡಬೇಕು. ಇದೇ ರೀತಿ ಮುಂದುವರಿದರೆ ಗೃಹ ಇಲಾಖೆ ವಿಶ್ವಾಸ ಕಳೆದುಕೊಳ್ಳಲಿದೆ. ಗುಪ್ತಚರ ಇಲಾಖೆ ವಿಫಲವಾಗಿರುವುದು ದುಃಖಕರ. “ಕಾಂಗ್ರೆಸ್ ಸರ್ಕಾರದ ಬ್ರದರ್ಸ್ ಕಲ್ಚರ್ ಇದಕ್ಕೆ ಕಾರಣ”. ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿಯೇ ಇಂತಹ ಬೆಳವಣಿಗೆ ಹೆಚ್ಚಾಗಿ ನಡೆಯುತ್ತದೆ. ನಮ್ಮ ಸರ್ಕಾರ ಅಧಿಕಾದಲ್ಲಿರುವವಾಗ ಇಂತಹ ಘಟನೆಗಲು ನಡೆಯುವುದಿಲ್ಲ. ಕಾಂಗ್ರೆಸ್ ಸರ್ಕಾರದ ಮೃದು ಧೋರಣೆ ಇಂತವರಿಗೆ ಸಹಾಯವಾಗುತ್ತದೆ. ತಪ್ಪಿತಸ್ಥರಿಗೆ ನಿರ್ಧಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸ್ವಾತಂತ್ರ್ಯ ಸಂಧರ್ಭದಲ್ಲಿ ಲೋಕಮಾನ್ಯ ತಿಲಕರು ಗಣೇಶ ಉತ್ಸವ ಮಾಡಿದರು. ಸ್ವಾತಂತ್ರ್ಯ ನಂತರ ಗಣೇಶೋತ್ಸವ ಎಲ್ಲರನ್ನೂ ಒಂದು ಮಾಡುತ್ತಿದೆ. ಬಡವರು, ಶ್ರೀಮಂತರು ಎಲ್ಲರೂ ಸೇರಿ ಒಟ್ಟಾಗಿ ಹಬ್ಬ ಆಚರಿಸ್ತಾರೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತೀ ವರ್ಷ ಇದೇ ರೀತಿ ಆಗುತ್ತದೆ. ಸರ್ಕಾರ ಇಂತವರನ್ನು ಗೂಂಡಾ ಆಕ್ಟ್ ಅಡಿಯಲ್ಲಿ ಬಂಧನ ಮಾಡಬೇಕು. ಪರ್ಮನೆಂಟ್ ಆಗಿ ಬಂಧನ ಮಾಡಬೇಕು. ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ಈ ರೀತಿ ಮಾಡುತ್ತಾರೆ. ಕ್ರಿಮಿನಲ್ ಗಳ ಪ್ರಕರಣ ಹಿಂಪಡೆದಿರುವುದೇ ಇದಕ್ಕೆ ಕಾರಣ. ಸ್ಥಳೀಯ ಜನರಿಗೆ ವಿಶ್ವಾಸ ತುಂಬಬೇಕಿದೆ. ಕಾನೂನು ಪಾಲನೆ ಆಗುವ ಕೆಲಸ ಆಗಬೇಕಿದೆ ಎಂದಿದ್ದಾರೆ.