ಬೆಂಗಳೂರು: ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ (Steve Smith) ಸ್ಮಿತ್, ಚಾಂಪಿಯನ್ಸ್ ಟ್ರೋಫಿಯ ಫೈನಲ್ನಲ್ಲಿ ಭಾರತ ವಿರುದ್ಧ ಪರಾಜಯ ಅನುಭವಿಸಿದ ಬಳಿಕ ಏಕದಿನ ಮಾದರಿಗೆ ವಿದಾಯ ಘೋಷಿಸಿದ್ದಾರೆ. 170 ಪಂದ್ಯಗಳನ್ನು ಆಡಿರುವ ಸ್ಮಿತ್ 12 ಶತಕಗಳನ್ನು ಬಾರಿಸಿರುವ ಜತೆಗೆ ಎರಡು ಬಾರಿ ಏಕದಿನ ವಿಶ್ವಕಪ್ ಪ್ರಶಸ್ತಿ ಗೆದ್ದಿದ್ದಾರೆ .
ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕೃತ ಪ್ರಕಟಣೆಯ ಪ್ರಕಾರ, 35 ವರ್ಷದ ಸ್ಮಿತ್ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಸೋಲಿನ ಬಳಿಕ ತಮ್ಮ ನಿರ್ಧಾರವನ್ನು ಸಹ ಆಟಗಾರರಿಗೆ ತಿಳಿಸಿದ್ದಾರೆ. , “ಇದು ಹೊರಡುವ ಸರಿಯಾದ ಸಮಯ ಎಂದು ನನಗನಿಸುತ್ತದೆ.” ಎಂದು ಸ್ಮಿತ್ ಹೇಳಿದ್ದಾರೆ.
The great Steve Smith has called time on a superb ODI career 👏 pic.twitter.com/jsKDmVSG1h
— Cricket Australia (@CricketAus) March 5, 2025
“ಇದು ಅದ್ಭುತ ಪ್ರಯಾಣವಾಗಿತ್ತು ಮತ್ತು ನಾನು ಪ್ರತಿಕ್ಷಣವನ್ನು ಆನಂದಿಸಿದ್ದೇನೆ. ಎರಡು ವಿಶ್ವಕಪ್ ಜಯಿಸುವುದು ನನ್ನ ಜೀವನದ ಪ್ರಮುಖ ಕ್ಷಣಗಳಲ್ಲಿ ಒಂದಾಗಿದೆ. ಜೊತೆಗೆ ಅನೇಕ ಅದ್ಭುತ ಸಹ ಆಟಗಾರರ ಜೊತೆ ಆಟವಾಡುವ ಅವಕಾಶವೂ ದೊರಕಿತ್ತು,” ಎಂದು ಸ್ಮಿತ್ ಹೇಳಿದ್ದಾರೆ.
“ಈಗ 2027ರ ODI ವಿಶ್ವಕಪ್‌ಗೆ ತಯಾರಿ ಆರಂಭಿಸಲು ಉತ್ತಮ ಸಮಯ. ಹಾಗಾಗಿ, ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ನಾನು ನಿರ್ಧಾರ ಕೈಗೊಂಡಿದ್ದೇನೆ. ಟೆಸ್ಟ್ ಕ್ರಿಕೆಟ್ ನನ್ನ ಆದ್ಯತೆ ಆಗಿರುತ್ತದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್, ವಿಂಡೀಸ್ ವಿರುದ್ಧದ ಸರಣಿ ಮತ್ತು ಬಳಿಕ ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಗೆ ನಾನು ಕಾತರನಾಗಿದ್ದೇನೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನೂ ಸಾಕಷ್ಟು ಕೊಡುಗೆ ನೀಡಲು ನನಗೆ ಸಾಧ್ಯವೆಂದು ಭಾವಿಸುತ್ತೇನೆ.” ಎಂದು ಸ್ಮಿತ್ ಹೇಳಿದ್ದಾರೆ.
ಇದನ್ನೂ ಓದಿ: Virat Kohli : ಒಡಿಐ ಚೇಸಿಂಗ್‌ನಲ್ಲಿ 8,000 ರನ್ ಪೂರೈಸಿದ ಕೊಹ್ಲಿ, ಸಚಿನ್ ಇರುವ ಎಲೈಟ್ ಪಟ್ಟಿಗೆ ಸೇರ್ಪಡೆ
ಸ್ಟೀವ್ ಸ್ಮಿತ್ ಒಡಿಐ ಕೆರಿಯರ್
ಏಕದಿನ ಮಾದರಿಯಲ್ಲಿ 5800 ರನ್ ಕಲೆಹಾಕಿದ ಸ್ಮಿತ್, 43.28 ಸರಾಸರಿ ಮತ್ತು 86.96 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 12 ಶತಕ ಹಾಗೂ 35 ಅರ್ಧಶತಕ ಬಾರಿಸಿದ್ದಾರೆ. 2016ರಲ್ಲಿ ನ್ಯೂಜಿಲೆಂಡ್ ವಿರುದ್ಧ ವಿರುದ್ಧ ಬಾರಿಸಿದ 164 ರನ್ ಅವರ ಅತ್ಯುತ್ತಮ ಸ್ಕೋರ್ ಆಗಿದೆ.
ಸ್ಮಿತ್ ಆಸ್ಟ್ರೇಲಿಯಾದ ಏಕದಿನ ತಂಡವನ್ನು 64 ಪಂದ್ಯಗಳಲ್ಲಿ ಮುನ್ನಡೆಸಿ 50% ಗೆಲುವಿನ ಶೇಕಡಾ ಸಾಧಿಸಿದ್ದಾರೆ. . ಮೊದಲ ವರ್ಷದಲ್ಲೇ ಇಂಗ್ಲೆಂಡ್ ಮತ್ತು ಭಾರತ ವಿರುದ್ಧ ಸರಣಿ ಜಯಗಳಿಸಿದ್ದರು. 2016ರಲ್ಲಿ ಚಾಪೆಲ್-ಹಾಡ್ಲಿ ಟ್ರೋಫಿ ಹಾಗೂ ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ವಿರುದ್ಧದ ತ್ರಿಕೋನ ಸರಣಿ ಜಯದ ಸಾಧನೆ ಮಾಡಿದರು.
2023-24 ಹಂಗಾಮಿನಲ್ಲಿ ಪ್ಯಾಟ್ ಕಮ್ಮಿನ್ಸ್ ಗೈರುಹಾಜರಿಯ ವೇಳೆ ವೆಸ್ಟ್ ಇಂಡೀಸ್ ವಿರುದ್ಧ 3-0 ಕ್ಲೀನ್ ಸ್ವೀಪ್ ಗೆಲುವು ಸಾಧಿಸುವ ತಂಡವನ್ನು ಮುನ್ನಡೆಸಿದ್ದರು.