ಬೆಂಗಳೂರು: ಸರ್ಕಾರದ ಟನಲ್ ಯೋಜನೆ ವಿರುದ್ಧ ಬಿಜೆಪಿ ನಾಯಕರು ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ. ಬೆಂಗಳೂರು ರಕ್ಷಿಸಿ, ಟನಲ್ ರೋಡ್ ನಿಲ್ಲಿಸಿ ಘೋಷಣೆ ಅಡಿಯಲ್ಲಿ ಅಭಿಯಾನ ಆರಂಭಿಸಲಾಗಿದೆ.
ವಿಪಕ್ಷ ನಾಯಕ ಅಶೋಕ್, ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಸಹಿ ಮಾಡುವುದರ ಮೂಲಕ ಆರ್ ಅಶೋಕ್, ಸಂಸದ ತೇಜಸ್ವಿ ಸೂರ್ಯ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಲಾಲ್‌ಬಾಗ್ ಗುಡ್ಡದ ಮೇಲೆ ಜನರ ಜೊತೆ ಬಿಜೆಪಿ ನಾಯಕರು ಕುಳಿತ ಅಭಿಯಾನ ನಡೆಸುತ್ತಿದ್ದಾರೆ. ವಿಪಕ್ಷ ನಾಯಕ ಅಶೋಕ್ ಟನಲ್ ರೋಡ್ ಮಾರ್ಗದ ಬಗ್ಗೆ ಜಂಟಿ ನಿರ್ದೇಶಕ ಜಗದೀಶ್ ಬಳಿ ಮಾಹಿತಿ ಕೇಳಿ ಪಡೆದಿದ್ದಾರೆ. ಅಲ್ಲದೇ ಜಿಬಿಎಯ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಜೊತೆ ಚರ್ಚೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಅಶೋಕ್, ಬೆಂಗಳೂರಿನ ಪರಿಸರ ಪ್ರೇಮಿಗಳ, ಇತಿಹಾಸ ಇರುವ, ಬೆಂಗಳೂರಿನ ಸಸ್ಯಕಾಶಿಗೆ ರಾಜ್ಯ ಸರ್ಕಾರ ಗುಂಡಿ ತೋಡುವ ಕೆಲಸ ಮಾಡುತ್ತಿದೆ. ಇದಕ್ಕೆ ವಿರೋಧವಾಗಿ ಬಿಜೆಪಿಯವರು ಸೇರಿದ್ದೇವೆ. ಸಾಕಷ್ಟು ಜನ ವಾಕರ್ಸ್ ಬಂದಿದ್ದಾರೆ, ಸೈಲೆಂಟ್ ಆಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಸುರಂಗ ಯೋಜನೆಯಿಂದ ಬೆಂಗಳೂರಿನ ಪರಿಸರ ಹಾಳಾಗುತ್ತದೆ. ಬೆಂಗಳೂರಿನ ಜನರು ನಿದ್ದೆಗೆಡುವ ಹಾಗಾಗಿದೆ. ಇದು ಟ್ವಿನ್ ಟನಲ್ ರಸ್ತೆ ಅಲ್ಲ, ಇದು ವಿಐಪಿ ಕಾರಿಡಾರ್ ಆಗುತ್ತದೆ. 90% ಜನ ಮಧ್ಯಮ ವರ್ಗದವರು ಹಾಗೂ ಬಡವರು, ಬೈಕ್, ಸೈಕಲ್‌ಗೆ ಎಂಟ್ರಿ ಇಲ್ಲ. ಕೇವಲ ಕಾರಿಗೆ ಮಾತ್ರ ಎಂಟ್ರಿ, ಅದಕ್ಕೆ ಇದು ವಿಐಪಿ ರೋಡ್. 8 ಸಾವಿರ ಕೋಟಿಗೆ ಟೆಂಡರ್ ಕರೆದಿದ್ದಾರೆ. 4 ಸಾವಿರ ಕೋಟಿ ಪೇಮೆಂಟ್ ಕೊಡಬೇಕು. ಈಗ ಸಾಲ ಮಾಡಲು ಹೊರಟಿದ್ದಾರೆ. ಅದಕ್ಕೆ ಬಡ್ಡಿ ಎಲ್ಲಿಂದ ಕೊಡ್ತೀರಾ? ಆರ್ಥಿಕ ಪರಿಸ್ಥಿತಿಯನ್ನ ಪಾತಾಳಕ್ಕೆ ತಳ್ಳುವ ಯೋಜನೆ ಇದು, ಭೂಮಿಯ ಆಳದಲ್ಲಿ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 84 ಹುದ್ದೆಗಳಿಗೆ ಅರ್ಜಿ ಆಹ್ವಾನ : 1.77 ಲಕ್ಷ ರೂ. ಸ್ಯಾಲರಿ



















