ಬೆಂಗಳೂರು: ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ (Core Committee Meeting) ಇಂದು ಮಲ್ಲೇಶ್ವರಂನಲ್ಲಿರುವ ಜಗನ್ನಾಥ ಭವನದಲ್ಲಿ(Jagannath Bhavan) ನಡೆಯಿತು. ಸಂಸದರು, ಶಾಸಕರು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ ವಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾಯಕರಿಗೆ ಹಲವು ಟಾಸ್ಕ್ ಕೊಟ್ಟಿದ್ದಾರೆ.
ಸಭೆಯಲ್ಲಿ ರಾಧಾಮೋಹನ್ ದಾಸ್(Radhamohan Das) ಪ್ರಸ್ತಾಪ ಮಾಡಿದ ವಿಚಾರಗಳಾದ್ರೂ ಏನು?
“ಕರ್ನಾಟಕ ನ್ಯೂಸ್ ಬೀಟ್”ಗೆ ಸಭೆಯಲ್ಲಿ ಆಗಿರುವ ಚರ್ಚೆಯ ಸಂಪೂರ್ಣ ಮಾಹಿತಿ ಲಭ್ಯವಾಗಿದೆ.
- ಬಿಜೆಪಿಯಲ್ಲಿ ಇಂದು ನಡೆದ ಸರಣಿ ಸಭೆ.
- ಸರಣಿ ಸಭೆಯ ಹೈಲೈಟ್ ಸಂಸದರುಗಳು, ಶಾಸಕರುಗಳು ಹಾಗೂ ಪದಾಧಿಕಾರಿಗಳ ಸಭೆ.
- ಸಭೆಯಲ್ಲಿ ಎಲ್ಲರಿಗೂ ಮಹತ್ವದ ವಿಚಾರ ಮುಟ್ಟಿಸಿದ ರಾಧಾಮೋಹನ್ ದಾಸ್ ಅಗರ್‌ವಾಲ್.
- ರಾಜ್ಯ ಬಿಜೆಪಿ, ಸಂಘಟನಾತ್ಮಕವಾಗಿ 39 ಜಿಲ್ಲೆಗಳನ್ನು ಮಾಡಿದೆ.
- ಇದರ ಪೈಕಿ ಮಹಿಳಾ ಮೀಸಲಾತಿಗೆ ಹೆಚ್ಚಿನ ಪ್ರಾತಿನಿಧ್ಯತೆ ನೀಡಬೇಕು.
- ಕನಿಷ್ಠ 10 ಸಂಘಟನಾತ್ಮಕ ಜಿಲ್ಲೆಗಳಾದ್ರೂ ಮಹಿಳೆಯರನ್ನು ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿ.
- ಈಗಾಗಲೇ ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಪೂರೈಕೆ ಮಾಡಿದ್ದಾರೆ.
- ಅದರಲ್ಲಿ ಯಾವ್ಯಾವ ಪದಾಧಿಕಾರಿಗಳು ನಿರೀಕ್ಷಿಸಿದ ಮಟ್ಟಕ್ಕೆ ಕಾರ್ಯನಿರ್ವಹಣೆ ಮಾಡಿಲ್ಲವೋ, ಅವರಿಗೆ ಅವಕಾಶ ಈ ಬಾರಿ ಬೇಡ.
- ಮಹಿಳಾ ಮೋರ್ಚಾ ಸೇರಿದಂತೆ ಎಲ್ಲಾ ಮೋರ್ಚಾದಲ್ಲಿನ ಅಧ್ಯಕ್ಷರನ್ನು ಬದಲಾವಣೆ ಮಾಡುವುದು ಉತ್ತಮ.
- ಇನ್ನು ಯಾವುದೇ ಜಿಲ್ಲೆಗೆ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ್ರೂ ಅವರಿಗೆ 60 ವರ್ಷಕ್ಕಿಂತ ವಯಸ್ಸು ಕೆಳಗಿರಬೇಕು.
- ಪ್ರಮುಖವಾಗಿ ಹೊಸ ಮುಖದ, ಪಕ್ಷ ಸಂಘಟನೆಗೆ ಉತ್ಸಾಹವಿರುವ, ವರ್ಚಸ್ಸು ವುಳ್ಳ ಮುಖಗಳಿಗೆ ಆದ್ಯತೆ ನೀಡಬೇಕು.
- ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಪಾಧ್ಯಕ್ಷರುಗಳು ಹಾಗೂ ರಾಜ್ಯ ಕಾರ್ಯದರ್ಶಿಗಳಿಗೆ ಕೊಟ್ಟಿರುವ ಟಾರ್ಗೆಟ್ ಸರಿ ಹೋಗಲಿಲ್ಲವಾದ್ರೆ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು.
- ರಾಷ್ಟ್ರೀಯಾಧ್ಯಕ್ಷರ ನೇಮಕದ ಬಳಿಕ ರಾಜ್ಯಾಧ್ಯಕ್ಷರ ಆಯ್ಕೆ ಅಥವಾ ಅಧಿಕೃತ ಘೋಷಣೆಯಾಗುತ್ತದೆ.
- ಇನ್ನು ಕೇಂದ್ರ ಸರ್ಕಾರವೇ ಮಹಿಳಾ ಮೀಸಲಾತಿ ಕೊಟ್ಟಿರುವಾಗ ಅದನ್ನು ನಾವು ಸದ್ಭಳಕೆ ಮಾಡಿಕೊಳ್ಳಲೇಬೇಕು.
ಹೀಗೆ ಸಾಲು ಸಾಲು ಸೂಚನೆಯನ್ನು ರಾಧಾಮೋಹನ್ ದಾಸ್ ಅಗರ್‌ವಾಲ್ ನೀಡಿದ್ದಾರೆ.