ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ನಲ್ಲಿ 1,511 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳನ್ನು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಮತ್ತು ಡೆಲಿವರಿ, ಇನ್ಫ್ರಾ ಸಪೋರ್ಟ್ ಅಂಡ್ ಕ್ಲೌಡ್ ಆಪರೇಷನ್ಸ್, ನೆಟ್ ವರ್ಕ್ ಆಪರೇಷನ್ಸ್, ಐಟಿ ಆರ್ಕಿಟೆಕ್ಟ್, ಇನ್ಫಾರ್ಮೇಷನ್ಸ್ ಸೆಕ್ಯೂರಿಟಿ ವಿಭಾಗಗಳಲ್ಲಿ ಡೆಪ್ಯೂಟಿ ಮ್ಯಾನೇಜರ್ ಗಳನ್ನು ಹಾಗೂ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಯನ್ನು ಸಿಸ್ಟಮ್ ವಿಭಾಗದಲ್ಲಿ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಪೈಕಿ ಅಸಿಸ್ಟಂಟ್ ಮ್ಯಾನೇಜರ್ 798 ಹುದ್ದೆಗಳಿವೆ. ಈ ಹುದ್ದೆಗಳನ್ನು ಎಸ್ ಬಿಐ ಮುಂಬಯಿ ಶಾಖೆ ಹಾಗೂ ಇನ್ನಿತರ ಶಾಖೆಗಳಿಗೆ ಭರ್ತಿ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಆಸಕ್ತರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 04-10-2024
ಅರ್ಜಿ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ: 19-10-2024
ಹುದ್ದೆ ಹೆಸರು – ಹುದ್ದೆಗಳ ಸಂಖ್ಯೆ
ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್) – ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಮತ್ತು ಡೆಲಿವರಿ : 187
ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್) – ಇನ್ಫ್ರಾ ಸಪೋರ್ಟ್ ಅಂಡ್ ಕ್ಲೌಡ್ ಆಪರೇಷನ್ಸ್ : 412
ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್ ) – ನೆಟ್‌ವರ್ಕ್ ಆಪರೇಷನ್ಸ್ : 80
ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್) – ಐಟಿ ಆರ್ಕಿಟೆಕ್ಟ್ : 27
ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್)- ಇನ್ಫಾರ್ಮೇಷನ್ಸ್ ಸೆಕ್ಯೂರಿಟಿ : 07
ಅಸಿಸ್ಟಂಟ್ ಮ್ಯಾನೇಜರ್ (ಸಿಸ್ಟಮ್) : 798
ಒಟ್ಟು ಹುದ್ದೆಗಳ ಸಂಖ್ಯೆ : 1511
ಯಾವುದೇ ಹುದ್ದೆಗೆ ಕಂಪ್ಯೂಟರ್ ಸೈನ್ಸ್ / ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ / ಮಾಹಿತಿ ತಂತ್ರಜ್ಞಾನ / ಇಲೆಕ್ಟ್ರಾನಿಕ್ಸ್ / ಇಲೆಕ್ಟ್ರಾನಿಕ್ಸ್ ಅಂಡ್ ಕಂಮ್ಯುನಿಕೇಷನ್ಸ್ ಇಂಜಿನಿಯರಿಂಗ್ / ಸಾಫ್ಟ್‌ವೇರ್ ಇಂಜಿನಿಯರಿಂಗ್ ಅಥವಾ ತತ್ಸಮಾನ ಪದವಿ ಅನ್ನು ಹುದ್ದೆಗಳಿಗೆ ಅನುಗುಣವಾಗಿ ಪಾಸ್ ಆಗಿರಬೇಕು. ಕೆಲವು ಹುದ್ದೆಗೆ ಎಂಸಿಎ, ಎಂ.ಟೆಕ್, ಎಂಎಸ್ಸಿ ಅನ್ನು ಇದೇ ಬ್ರ್ಯಾಂಚ್‌ಗಳಲ್ಲಿ ಪಾಸ್ ಮಾಡಿರಬೇಕು.
ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗೆ 21 ರಿಂದ 30 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಬಹುದು. ಡೆಪ್ಯೂಟಿ ಮ್ಯಾನೇಜರ್ ವರ್ಗದ ಹುದ್ದೆಗಳಿಗೆ 25 ರಿಂದ 30 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಎಸ್ ಬಿಐ ಸ್ಪೆಷಲಿಸ್ಟ್ ಆಫೀಸರ್ ಅಧಿಸೂಚನೆಗಾಗಿ ವೆಬ್ ವಿಳಾಸ : https://sbi.co.in/web/careers ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.