ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದಲ್ಲಿ 63 ಸೈಂಟಿಸ್ಸ್/ಎಂಜಿನಿಯರ್ ಗಳ ಹುದ್ದೆ ಖಾಲಿ ಇದ್ದು, ನೇಮಕಾತಿಗಾಗಿ (ISRO Recruitment 2025) ಅಧಿಸೂಚನೆ ಹೊರಡಿಸಲಾಗಿದೆ. ಇಸ್ರೋ ವೆಬ್ ಸೈಟ್ ಆಗಿರುವ isro.gov.inಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮೇ 19 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಬಿ.ಟೆಕ್ ಅಥವಾ ಬಿಇ ಶಿಕ್ಷಣವನ್ನು ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್ ಬ್ರ್ಯಾಂಚ್ ಗಳಲ್ಲಿ ಪಡೆದಿರಬೇಕು. ಕನಿಷ್ಠ ಶೇ.65ರಷ್ಟು ಅಂಕಗಳೊಂದಿಗೆ ಪಾಸ್ ಆದವರು ಅರ್ಜಿ ಸಲ್ಲಿಸಬಹುದಾಗಿದೆ. ಏಪ್ರಿಲ್ 29ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಮೇ 19ರೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಶುಲ್ಕ ಪಾವತಿಸಲು ಮೇ 21 ಕೊನೆಯ ದಿನವಾಗಿದೆ.
ಯಾವ ಹುದ್ದೆ ಎಷ್ಟು ಖಾಲಿ?
ಸೈಂಟಿಸ್ಟ್ / ಎಂಜಿನಿಯರ್ ‘SC’ (ಎಲೆಕ್ಟ್ರಾನಿಕ್ಸ್)- 22
ಸೈಂಟಿಸ್ಟ್ / ಎಂಜಿನಿಯರ್ ‘ SC ‘ (ಮೆಕ್ಯಾನಿಕಲ್)- 33
ಸೈಂಟಿಸ್ಟ್ / ಎಂಜಿನಿಯರ್ ‘ SC ‘ (ಕಂಪ್ಯೂಟರ್ ಸೈನ್ಸ್)- 08
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ವರ್ಗದವರಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇದೆ. ಜನರಲ್ ಕೆಟಗರಿ, ಒಬಿಸಿ ಸೇರಿ ಎಲ್ಲ ಕೆಟಗರಿಯವರಿಗೆ 250 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ಮಾಸಿಕ 56,100 ಮಾಸಿಕ ವೇತನ ನೀಡಲಾಗುತ್ತದೆ.



















