ಬೆಂಗಳೂರು : ಇಲ್ಲಿಯ ಬೊಮ್ಮನಹಳ್ಳಿಯಲ್ಲಿ ಅದ್ದೂರಿಯಾಗಿ ಶ್ರೀರಾಮಾಂಜನೇಯ ಬ್ರಹ್ಮರಥೋತ್ಸವ ನಡೆಯಿತು.
ಬೆಂಗಳೂರಿನ ಐತಿಹಾಸಿಕ ಹೊಂಗಸಂದ್ರ ಶ್ರೀರಾಮಾಂಜನೇಯ ಬ್ರಹ್ಮರಥೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಶ್ರೀರಾಮಂಜನೇಯನನ್ನು ಇಷ್ಟಾರ್ಥಗಳನ್ನು ಈಡೇರಿಸುವ ಸ್ವಾಮಿ ಎಂದೇ ಈ ಭಾಗದಲ್ಲಿ ಪೂಜಿಸುತ್ತಾರೆ. ಹೀಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶ್ರೀರಾಮಾಂಜನೇಯ ಸ್ವಾಮಿ ರಥೋತ್ಸವಕ್ಕೆ ಸಾಕ್ಷಿಯಾದರು.
ಭಕ್ತರು, ರಥೋತ್ಸವಕ್ಕೆ ಬಾಳೆಹಣ್ಣು, ದವಸ-ಧಾನ್ಯ ಎಸೆದು ಹರಕೆ ತೀರಿಸಿದ್ದಾರೆ. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಹೊಂಗಸಂದ್ರದಿಂದ – ಬೊಮ್ಮನಹಳ್ಳಿವರೆಗೆ ರಥ ಎಳೆದು ಭಕ್ತಿಯ ಪರಾಕಾಷ್ಟೆ ಮೆರೆದಿದ್ದಾರೆ. ವಿವಿಧ ಭಾಗಗಳಿಂದ ಕಲಾತಂಡಗಳು ಆಗಮಿಸಿದ್ದವು.



















