ಕೋಲಾರ: ನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಾಗಿ ತಂದೆಗೆ 7 ದಿನವಾದರೂ ಚಿಕಿತ್ಸೆ ನೀಡದ ವೈದ್ಯರ ವಿರುದ್ಧ ವಿದೇಶದಲ್ಲಿ ವಿಡಿಯೋ ಮಾಡಿ ವೈದ್ಯರ ವಿರುದ್ಧ ಮಗ ಆಕ್ರೋಶ ಹೊರಹಾಕಿದ್ದಾನೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಜಗ್ದಾರಸನಹಳ್ಳಿಯ ಮೂಲದ ಚಿಕ್ಕ ಮುನಿಯಪ್ಪಗೆ ಹಸು ಗುದ್ದಿ ಕೈ ಮುರಿದಿತ್ತು. ಚಿಕಿತ್ಸೆಗೆಂದು ಕೋಲಾರ ಜಿಲ್ಲಾಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ 7 ದಿನ ಕಳೆದರೂ ವೈದ್ಯರು ಸರ್ಜರಿ ಮಾಡಿಲ್ಲವೆಂದು ವಿದೇಶದಲ್ಲಿದ್ದ ಮಗ ವಿಡಿಯೋ ಮಾಡಿ ಆಕ್ರೋಶ ಹೊರಹಾಕಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿ ಕೋಲಾರ ಜಿಲ್ಲಾಸ್ಪತ್ರೆ ವಿರುದ್ಧ ಮಗ ನಾಗೇಶ್ ಅಸಮಾಧಾನ ಹೊರಹಾಕಿದ್ದಾರೆ. ತನ್ನ ತಂದೆ ವೈದ್ಯರು ಸರ್ಜರಿ ಮಾಡದೇ ಸತಾಯಿಸುತ್ತಿದ್ದು, ಲಂಚ ಕೊಡದ ಹಿನ್ನೆಲೆ ಸರ್ಜರಿ ಮಾಡುತ್ತಿಲ್ಲವೆಂದು ವೈದ್ಯರ ವಿರುದ್ಧ ನಾಗೇಶ್ ಆರೋಪ ಮಾಡಿದ್ದಾರೆ. ಜಿಲ್ಪಾಸ್ಪತ್ರೆ ವಿರುದ್ಧ ಆಕ್ರೋಶ ಹೊರ ಹಾಕಿದ ವಿಡಿಯೋ ವೈರಲ್ ಹಿನ್ನೆಲೆ ಎಚ್ಚೆತ್ತ ಜಿಲ್ಲಾಸ್ಪತ್ರೆ ವೈದ್ಯರು ಈಗ ಸರ್ಜರಿ ಮಾಡಲು ಮುಂದಾಗಿದ್ದಾರೆ.