ಶಿವಮೊಗ್ಗ : ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಗಣತಿ ಈಗಾಗಲೇ ರಾಜ್ಯದ್ಯಾಂತ ನಡೆಯುತ್ತಿದೆ. ಆದರೆ, ಮಲೆನಾಡು ಪ್ರದೇಶಗಳಲ್ಲಿ ಅಂತರ್ಜಾಲ ಹಾಗೂ ರಸ್ತೆ ಸಮಸ್ಯೆಗಳಿಂದ ಹಲವು ಪ್ರದೇಶಗಳಲ್ಲಿ ಸಮೀಕ್ಷೆ ನಡೆದಿಲ್ಲ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಾರಂಗಿಲ್ಲ ಹೋಬಳಿಯ ತೋಟದೂರು, ಸಾವೆಕಟ್ಟು, ಕಡಕೋಡು, ಹಾಲ್ಮಿ ಕಣಪಗಾರು ಊರುಗಳಲ್ಲಿ ಸಮೀಕ್ಷೆ ಇಲ್ಲಿಯವರೆಗೆ ನಡೆದೆ ಇಲ್ಲ, ನೆಟ್ವರ್ಕ್ ನೆಪ ಇಟ್ಟುಕೊಂಡು ಅಧಿಕಾರಿಗಳು ಸಮೀಕ್ಷೆಗೆ ಹೋಗುತ್ತಿಲ್ಲ. ಗ್ರಾಮ ಪಂಚಾಯಿತಿ ಕಚೇರಿಗೆ ಬಂದು ಸಮೀಕ್ಷೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ. ಸಮೀಕ್ಷೆ ಕಾರ್ಯಕ್ಕೆ ಜನ ಹೋಗಬೇಕು ಎಂದರೆ ದಾಖಲೆಗಳನ್ನು ತೆಗೆದುಕೊಂಡು 15 ಕಿ.ಮೀ ಕಾಲು ನಡುಗೆಯಲ್ಲಿ ಹೋಗಬೇಕು. ಅಷ್ಟೇ ಅಲ್ಲದೇ, ಸರಿಯಾದ ಸಾರಿಗೆ ವ್ಯೆವಸ್ಥೆಯೂ ಇಲ್ಲ, ಈ ರೀತಿಯ ಮೂಲ ಸೌಕರ್ಯವಿಲ್ಲದೆ ಇರುವುದರಿಂದ ಸಮೀಕ್ಷೆ ನಡೆಸಲು ಕಷ್ಟವಾಗುತ್ತಿದೆ.
ಇನ್ನೊಂದು ಕಡೆಯಲ್ಲಿ ಸಾರ್ವಜನಿಕರೇ ನಿರ್ದಿಷ್ಟ ಜಾಗಕ್ಕೆ ಬಂದು ಸಮೀಕ್ಷೆ ಮಾಡಿ ನಮ್ಮ ಗಣತಿಯಾಗದೆ ಇದ್ದರೆ ಎಲ್ಲಿ ತಮ್ಮ ದಾಖಲೆ ಬಿಟ್ಟು ಹೋಗುತ್ತದೆ ಎಂದು ಜನ ಸಹಕರಿಸಿದರೆ ಅಧಿಕಾರಿಗಳು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ.
ಈ ಹಿಂದೆ ಹಲವು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಕೇಳಿದರು ಸಹ ಯಾರು ಇಲ್ಲಿಯವರೆಗೂ ಭೇಟಿ ನೀಡಲಿಲ್ಲ ಈ ಹಿನ್ನೆಲೆಯಲ್ಲಿಯೇ ಸಾಗರ ತಾಲೂಕಿನ ಹಲವು ಊರುಗಳಲ್ಲಿ ಗಣತಿ ಸರಿಯಾಗಿ ನಡೆದಿಲ್ಲ ಎಂದು ತಿಳಿದು ಬಂದಿದೆ.