ಶ್ರೀನಗರ: ಪಾಕಿಸ್ತಾನ್ ಒಳಗೆ ಬೆಂಕಿ ಬಿದ್ದರೂ ಅದಕ್ಕೆ ಬುದ್ಧಿ ಬರುತ್ತಿಲ್ಲ. ದಂಗೆಕೋರರು ರೈಲು ಹೈಜಾಕ್ ನಡೆಸಿ, ಮಾರಣ ಹೋಮ ನಡೆಸುತ್ತಿದ್ದರೂ ಇತ್ತ ಗಡಿಯಲ್ಲಿ ತನ್ನ ದುರ್ಬುದ್ಧಿ ಮುಂದುವರೆಸಿದೆ.
ರಜೌರಿ (Rajouri) ಜಿಲ್ಲೆಯ ನೌಶೇರಾದ ಕಲ್ಸಿಯಾನ್ ಪ್ರದೇಶದ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನ (Pakistan) ಸ್ನೈಪರ್ ಗುಂಡಿನ ದಾಳಿ ನಡೆಸಿದೆ. ಘಟನೆಯಲ್ಲಿ ಭಾರತೀಯ ಯೋಧರೊಬ್ಬರು ಗಾಯಗೊಂಡಿದ್ದಾರೆ
ಗೂರ್ಖಾ ರೆಜಿಮೆಂಟ್ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನ ಮೇಲೆ ಸ್ನೈಪರ್ ಗುಂಡಿನ ದಾಳಿ ನಡೆದಿದೆ. ಗಾಯಗೊಂಡ ಯೋಧರನ್ನು ಉಧಂಪುರದಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಬಗ್ಗೆ ಎಚ್ಚರಿಕೆ ನೀಡಿದ್ದು, ನಿಯಂತ್ರಣ ರೇಖೆಯ ಉದ್ದಕ್ಕೂ ಪರಿಸ್ಥಿತಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ.