ಕಾಶ್ಮೀರ ಕಣಿವೆಯಲ್ಲಿ ಉಗ್ರರ ರಣಬೇಟೆ ಮುಂದುವರಿದಿದೆ. ಕಳೆದ 48 ಗಂಟೆಗಳಲ್ಲಿ ಕಣವೆ ರಾಜ್ಯದಲ್ಲಿ ಸೇನೆ ಆರು ಉಗ್ರರನ್ನು ಸದೆಬಡಿದಿದೆ. ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಆರು ಜಿಹಾದಿಗಳನ್ನು ಹತ್ಯೆ ಮಾಡಲಾಗಿದೆ ಅಂತಾ ಮೇಜರ್ ಜನರಲ್ ಧನಂಜಯ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಉಗ್ರರು ಅಡಗಿದ್ದ ತಾಣಗಳ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ ಉಗ್ರರು ಸೇನಾಪಡೆಗಳ ಮೇಲೆ ನಿರಂತರ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕುತ್ತರವಾಗಿ ನಡೆದ ಕಾಳಗದಲ್ಲಿ ಆರು ಮಂದಿಯನ್ನು ಹೊಡೆದುರುಳಿಸಲಾಗಿದೆ ಅಂತಾ ಜೋಷಿ ಹೇಳಿದ್ದಾರೆ. ಅಷ್ಟೇ ಅಲ್ಲಾ ಪಹಲ್ಗಾಮ್ ದಾಳಿಕೋರರಿಗಾಗಿಯೂ ಕಣಿವೆ ರಾಜ್ಯದಲ್ಲಿ ತೀವ್ರ ಹುಡುಕಾಟ ಜಾರಿಯಲ್ಲಿದೆ ಅಂತಾ ಅವರು ಸ್ಪಷ್ಟಪಡಿಸಿದ್ದಾರೆ.