ಎಲ್ ಐಸಿ ಹಣಕ್ಕಾಗಿ ತಂದೆಯನ್ನೇ ಕೊಲೆ ಮಾಡಿದ ಪಾಪಿ ಮಗ; ಮತ್ತೋರ್ವ ಮಗ ಆತ್ಮಹತ್ಯೆ
ಮೈಸೂರು: ಪಾಪಿ ಮಗನೊಬ್ಬ ಎಲ್ ಐಸಿ ಹಣಕ್ಕಾಗಿ (LIC Fund) ತಂದೆಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಮೈಸೂರು (Mysuru) ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಸಮೀಪದ ಗೆರೋಸಿ ಕಾಲೋನಿಯಲ್ಲಿ ನಡೆದಿದೆ. ಅಲ್ಲದೇ, ಈ ಸುದ್ದಿ ಕೇಳಿ ಮತ್ತೋರ್ವ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂದೆ ಅಣ್ಣಪ್ಪನ ಹೆಸರಿನಲ್ಲಿ ಮಗ ಪಾಂಡು ವಿಮೆ ಮಾಡಿಸಿದ್ದ. ಈ ವಿಮೆ ಹಣಕ್ಕಾಗಿ ಹಿಂಬದಿಯಿಂದ ತಲೆಗೆ ದೊಣ್ಣೆಯಲ್ಲಿ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಆನಂತರ ಅಪರಿಚಿತ ವಾಹನ ಡಿಕ್ಕಿಯಾಗಿ ತಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ಆರೋಪಿ ಪಾಂಡು ಕಥೆ ಕಟ್ಟಿದ್ದಾನೆ. ಅಲ್ಲದೇ, ತಾನೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಪೊಲೀಸರಿಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪಾಂಡುನನ್ನು ವಶಕ್ಕೆ ಪಡೆದು ತಮ್ಮ ಭಾಷೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಆಗ ಈ ವಿಷಯ ಬೆಳಕಿಗೆ ಬಂದಿದೆ. ತಂದೆ ಸಾವನ್ನಪ್ಪಿದ ಸುದ್ದಿ ಕೇಳಿ, ಮತ್ತೋರ್ವ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.