ನಟ ರಾಕ್ಷಸ ಡಾಲಿ ಧನಂಜಯ್ ಇಂದು ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ವೈದ್ಯೆ ಧನ್ಯತಾ ಜೊತೆಗೆ ವಿವಾಹ ಬಂಧಕ್ಕೆ ಒಳಗಾಗುತ್ತಿರುವುದಾಗಿ ಡಾಲಿ ದೀಪಾವಳಿ ಸಂದರ್ಭದಲ್ಲಿ ಬಹಿರಂಗ ಪಡಿಸಿದ್ದರು. ಈಗ ಸರಳವಾಗಿ ಧನ್ಯತಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಇಂದು ಡಾಲಿ ಧನಂಜಯ್ ಹಾಗೂ ಧನ್ಯತಾ ಅವರ ನಿಶ್ಚಿತಾರ್ಥ ಮತ್ತು ಲಗ್ನ ಪತ್ರಿಕೆ ಬರೆಸುವ ಶಾಸ್ತ್ರ ನಡೆಯಿತು. ಡಾಲಿ ಧನಂಜಯ್ ಅವರ ಅರಸೀಕೆರೆಯ ಕಾಳೇನಹಳ್ಳಿಯಲ್ಲಿಯ ಮನೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಸ್ನೇಹಿತರು, ಹಿರಿಯರು ಮಾತ್ರ ಭಾಗವಹಿಸಿದ್ದರು. ಡಾಲಿ ಧನಂಜಯ್ ಅವರು ತಮ್ಮ ಭಾವಿ ಪತ್ನಿ ಧನ್ಯತಾ ಅವರ ಬೆರಳಿಗೆ ಉಂಗುರ ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡರು. ಧನ್ಯತಾ ಅವರೂ ಡಾಲಿ ಬೆರಳಿಗೆ ಉಂಗುರ ತೊಡಿಸಿದ್ದಾರೆ. ಅಲ್ಲದೇ, ಡಾಲಿ ಧನಂಜಯ್ ಹಾಗೂ ಧನ್ಯತಾ ಅವರ ಮದುವೆ ಫೆ. 16 ರಂದು ನಡೆಯಲಿದೆ ಎನ್ನಲಾಗಿದೆ.
ಡಾಲಿ ಧನಂಜಯ್ ಪತ್ನಿ ಧನ್ಯತಾ ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಇಬ್ಬರೂ ಪರಸ್ಪರ ಒಪ್ಪಿ ಮದುವೆಗೆ ಮುಂದಾಗಿದ್ದಾರೆ. ಧನ್ಯತಾ ಕಷ್ಟಪಟ್ಟು ಸಾಧನೆ ಮಾಡಿದ ಯುವತಿ, ಅವರ ಎಲ್ಲ ಗುಣಗಳು ನನಗೆ ಇಷ್ಟ ಆದವು. ಹೀಗಾಗಿ ಮದುವೆಗೆ ಒಪ್ಪಿದೆ ಎಂದು ಧನಂಜಯ್ ಇತ್ತೀಚೆಗಷ್ಟೇ ಹೇಳಿದ್ದರು.