ಶಿವಮೊಗ್ಗ : ಸಂಸದರಿಗೆ ಮಾಡುವುದಕ್ಕೆ ಕೆಲಸವಿಲ್ಲ. ಕೇಂದ್ರ ಕೊಟ್ಟಿರುವ ಹಣವನ್ನು ಅವರಪ್ಪನ್ ಮನೆ ಹಣ ಎಂದುಕೊಂಡಿದ್ದಾರೆ. ಇನ್ವಿಟೇಶನ್ ಹಿಡಿದು, ಅವರೇ ಪೋಸ್ಟ್ ಮನ್ ರೀತಿ ಕೆಲಸ ಮಾಡಿದ್ದಾರೆ. ಇವನ್ನೆಲ್ಲಾ ಹೇಳುವುದಕ್ಕೆ ನನಗೆ ಹೇಸಿಗೆ ಆಗುತ್ತದೆ ಎಂದು ಸಿಗಂದೂರು ಸೇತುವೆ ಕ್ರೆಡಿಟ್ ವಾರ್ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗಾರರಿಗೆ ಸ್ಪಂದಿಸಿದ ಅವರು, ಸಿಗಂದೂರು ಸೇತುವೆ ಮೇಲೆ ಭಕ್ತರು ಸಂಚರಿಸಬಹುದು. ಜೊತೆಗೆ ಆ ಭಾಗದ ಜನ ಓಡಾಡ್ತಾರೆ. ಯಾರಿಗೂ ಅಗೌರವ ತೋರಬಾರದು. ಅದು ಅವರಿಗೆ ವಾಪಸ್ ಹೊಡೆಯುತ್ತದೆ. ಒಂದು ದಿನವಾದರೂ ತೆರಿಗೆ ಬಗ್ಗೆ ಇವರು ಮಾತನಾಡಿದ್ದಾರಾ.? ದುಡ್ಡು ತಂದ ಕೂಡಲೇ ಇವರೇ ತಂದಂತೆ ಮಾಡುತ್ತಿದ್ದಾರೆ. ಇದರ ನ್ಯೂನತೆ ಬಗ್ಗೆ ಮುಂದಿನ ದಿನಗಳಲ್ಲಿ ಬಿಚ್ಚಿಡುತ್ತೇನೆ. ಜನರು ಓಡಾಡಲಿ ಎಂದು ಸುಮ್ಮನಿದ್ದೇನೆ ಎಂದು ಅವರು ಹೇಳಿದ್ಧಾರೆ.