ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು. ಈ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದೇವೆ. ಪದೆ ಪದೆ ಹೇಳುವ ಅವಶ್ಯಕತೆ ಇಲ್ಲ. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದೆ. ಹೈಕಮಾಂಡ್ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಚಿವ ಸತೀಶ್ ಜಾರಕೀಹೊಳಿ ಹೇಳಿದ್ದಾರೆ.
ವರದಿಗಾರರಿಗೆ ಸ್ಪಂದಿಸಿದ ಜಾರಕಿಹೊಳಿ, ೨೦೨೮ ಕ್ಕೆ ಸಿದ್ದರಾಮಯ್ಯ ಅವರೇ ಚುನಾವಣೆ ಲೀಡ್ ಮಾಡಲಿದ್ದಾರೆ. ಆದರೇ ಅವರೇ ಸಿಎಂ ಆಗುತ್ತಾರೆಂದು ನಾನು ಹೇಳುವುದಿಲ್ಲ. ಸಿದ್ದರಾಮಯ್ಯ ಅವರು ರಾಜಕೀಯದಲ್ಲಿರುತ್ತಾರೆ. ಅವರ ನೇತೃತ್ವದಲ್ಲೇ ಮುಂದಿನ ಚುನಾವನೆ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ.
2028ರ ಚುನಾವಣೆಗೆ ಸಿದ್ದರಾಮಯ್ಯ ಅವರು ನಿಲ್ಲಲ್ಲ ಅಂದಿದ್ದಾರೆ. ಅಲ್ಲಿಯವರೆಗೆ ಸಿಎಂ ಚರ್ಚೆ ಏನು ಇಲ್ಲ. ನಿನ್ನೆ ಸಿಎಂ ಹೇಳಿದ ಮೇಲೆ ಮುಗಿಯಿತು, ಮತ್ತೆ ಚರ್ಚೆ ಮಾಡುವ ಹಾಗಿಲ್ಲ. 2028ಕ್ಕೆ ಸಿದ್ದರಾಮಯ್ಯ ನಮಗೆ ಬಿಟ್ಟುಕೊಟ್ಟರೆ ನೋಡೋಣ. ಅಲ್ಲಿಯವರೆಗೆ ಸಿಎಂ ಬದಲಾವಣೆ ಇಲ್ಲ ಎಂದಿದ್ದಾರೆ. ನಿನ್ನೆ ಸಿದ್ದರಾಮಯ್ಯ ಹೇಳಿದ್ದು ಸುಪ್ರೀಂ ಕೋರ್ಟ್ ಜಡ್ಜಮೆಂಟ್ ಇದ್ದಹಾಗೆ. ಮತ್ತೆ ಬೇರೆ ಏನು ಅವಕಾಶ ಇದೆ. ಚರ್ಚೆ ನಿನ್ನೆಗೆ ಮುಗಿಯಿತು ಎಂದು ಹೇಳಿದ್ದಾರೆ.


















